ಸುಬ್ಬು ಧೈರ್ಯ ಕಂಡ ಸರ್ಕಸ್ ಸುಂದರಿ ತಬ್ಬಿಬ್ಬು

ಅರಮನೆ ಮೈದಾನದಲ್ಲಿ ಬಂದಿದ್ದ ಬಂಜೋ ಸರ್ಕಸ್ಸಿಗೆ ಸುಬ್ಬು ತನ್ನ ಹೆಂಡತಿ ಸುಬ್ಬಿ, ಮಕ್ಕಳಾದ ತಿಮ್ಮ ಮತ್ತು ಗುಂಡನನ್ನು ಕರೆದುಕೊಂಡು ಹೋದ. ಮೊದಲು ಜೋಕಾಲಿಯಾಟ, ಆನೆ ಸೈಕಲ್ ಓಡಿಸುವುದು, ಸುಂದರಿ ಬಂದು ಗಿಳಿಗಳೊಂದಿಗೆ ಆಟವಾಡುವುದು, ಲಲನಾಮಣಿಗಳ ಸೈಕಲ್ ಸವಾರಿ, ಜೋಕರ್ ಹಾಸ್ಯ ಮುಗಿದ ಮೇಲೆ ಕೊನೆಗೆ ರಿಂಗ್ ಮಿಸ್ ಸಿಂಹವನ್ನು ಕರೆದುಕೊಂಡು ಬಂದಳು.

ಚಾಟಿ ಬೀಸಿ, ಸಿಂಹ ಗುರ್ ಅನ್ನುವುದನ್ನು ಲೆಕ್ಕಿಸದೆ ನಾಲ್ಕಾರು ಸುತ್ತು ಅದರಿಂದ ಚೇಷ್ಟೆಗಳನ್ನು ಮಾಡಿಸಿ ಕಡೆಗೆ ಸಿಂಹದ ತುಟಿಗೆ ಒಂದು ಮುತ್ತನ್ನಿಟ್ಟಳು. ಮೈಜುಂ ಎನ್ನಿಸುವ ಈ ಪ್ರದರ್ಶನವನ್ನು ನೋಡಿ ಎಲ್ಲರಿಂದ ಹರ್ಷೋದ್ಘಾರ, ಚಪ್ಪಾಳೆ ಶೀಟಿಗಳ ಸುರಿಮಳೆ. ಎಲ್ಲವನ್ನೂ ಹಸನ್ಮುಖದಿಂದ ಸ್ವೀಕರಿಸಿದ ತುಂಡುಡುಗೆಯ ಸುಂದರಿ ಕೊನೆಗೊಂದು ಪ್ರಶ್ನೆ ಕೇಳಿದಳು.

"ಸ್ನೇಹಿತರೆ, ಹೀಗೆ ಧೈರ್ಯದಿಂದ ಮುತ್ತಿಡುವ ಗುಂಡಿಗೆ ಯಾವ ಗಂಡಿಗಾದರೂ ಇದೆಯಾ?

ಯಾರಿಂದಲೂ ಉತ್ತರವಿಲ್ಲ. ಇಲ್ಲ ಇಲ್ಲ ಎಂದು ಎಲ್ಲರೂ ಕೈಯಾಡಿಸುವರೆ. ಸುಬ್ಬಿಯಂತೂ ಇನ್ನೂ ಶಾಕ್‌ನಿಂದ ಹೊರಬಂದಿರಲಿಲ್ಲ. ಮಕ್ಕಳಾದ ಗುಂಡ ಮತ್ತು ತಿಮ್ಮ ತಮ್ಮ ಲೋಕದಲ್ಲಿ ಮುಳುಗಿದ್ದರು. ಕಡೆಗೆ ಸುಬ್ಬನೇ ಕೈಎತ್ತಿ "ನಾನು ಮುತ್ತಿಡುತ್ತೇನೆ" ಎಂದು ಧೈರ್ಯವಾಗಿ ಹೇಳಿದ.

ಈ ಮಾತನ್ನು ಕೇಳಿ, ಕಿವಿಗಡಚಿಕ್ಕುವ ಚಪ್ಪಾಳೆಯ ಸದ್ದು ಇದ್ದಕ್ಕಿದ್ದಂತೆ ತಣ್ಣಗಾಯಿತು. ಅದೇ ಸಮಯದಲ್ಲಿ ಗುರ್ ಎಂದ ಸಿಂಹದ ಘರ್ಜನೆ ಕೇಳಿ ಗುಂಡ ಮತ್ತು ತಿಮ್ಮ ಚಡ್ಡಿಯಲ್ಲಿ ಸುಸ್ಸು ಮಾಡಿಕೊಂಡಿದ್ದರು. ಸುಬ್ಬಿ ಗರಬಡಿದವಳಂತೆ ಕುಳಿತುಬಿಟ್ಟಿದ್ದಳು.

"ಸರಿ ಬನ್ನಿ" ಎಂದು ತುಂಡುಡುಗೆ ತೊಟ್ಟಿದ್ದ ಸುಂದರಿ ಸುಬ್ಬುವನ್ನು ಆಹ್ವಾನಿಸಿದಳು.

ಅದಕ್ಕೆ ಸುಬ್ಬು "ಮೊದಲು ಆ ಸಿಂಹವನ್ನು ಪಂಜರದಿಂದ ಆಚೆ ಕಳಿಸಿ, ನಂತರ ಕೊಡುತ್ತೇನೆ" ಎಂದಾಗ ತಬ್ಬಿಬ್ಬಾದ ತುಂಬು ಯೌವನದ ಸರ್ಕಸ್ ಸುಂದರಿ ಮೂರ್ಛೆ ಹೋಗಿದ್ದಳು, ಸುಬ್ಬಿಯ ಮುಖ ಕೆಂಪೇರಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+