ಮುತ್ತು ಕೊಟ್ಟು ಬೆಟ್ ಸೋತ ಲಲ್ಲಿ ನಲ್ಲ ಪಲ್ಲಿ

ಚೆಲ್ಲುಚೆಲ್ಲು ಹುಡುಗಿ ಲಲ್ಲಿಯ ಜೊತೆ ನಲ್ಲ ಪಲ್ಲಿ ಲಲ್ಲೆ ಹೊಡೆಯುತ್ತಿರುತ್ತಾನೆ. ಅವರ ಸಾಂಗತ್ಯ ವರ್ಷ ದಾಟಿದರೂ ಪಲ್ಲಿಗೆ ಲಲ್ಲಿಯ ಗಲ್ಲದ ಮೇಲೆ ಮೆಲ್ಲನೆ ಒಂದು ಮುತ್ತನ್ನೂ ಕೊಡಲು ಸಾಧ್ಯವಾಗಿರುವುದಿಲ್ಲ. ಕಡೆಗೆ ಆ ದಿನ ದಿಟ್ಟ ನಿರ್ಧಾರಕ್ಕೆ ಬಂದುಬಿಡುತ್ತಾನೆ.

ಪಲ್ಲಿ : ನೋಟದಲ್ಲೇ ಕೊಲ್ಲುವ ಲಲ್ಲಿ ಲಲ್ಲಿ, ನಿನ್ನನ್ನು ಮುಟ್ಟದೆ ಒಂದೇ ಒಂದು ಮುತ್ತು ಕೊಡಲಾ? (ತುಂಟ ನಗೆ ಬೀರುತ್ತಾನೆ)

ಲಲ್ಲಿ : ಲೇ ಪಲ್ಲಿ, ಟಚ್ ಮಾಡದೆನೆ ಕಿಸ್ ಮಾಡೋದು ಹೇಗೆ ಸಾಧ್ಯ? (ಕಣ್ಣರಳಿಸಿ ಕೇಳುತ್ತಾಳೆ)

ಪಲ್ಲಿ : ಖಂಡಿತ ಸಾಧ್ಯ. ಬೇಕಾದರೆ ನೂರು ರು. ಬೆಟ್?

ಲಲ್ಲಿ : ಓಕೆ.

ಪಲ್ಲಿ ಲೊಚಕ್ಕನೆ ಲಲ್ಲಿಯ ತುಟಿಗೆ ಮೇಲೆ ಕಿಸ್ ಕೊಟ್ಟುಬಿಡುತ್ತಾನೆ. ಲಲ್ಲಿಯ ಗಲ್ಲ ಕೆಂಪೇರಿರುತ್ತದೆ. ಕೋಪದಿಂದ ಬುಸುಗುಡಲು ಪ್ರಾರಂಭಿಸುತ್ತಾಳೆ.

ಲಲ್ಲಿ : ಟಚ್ ಮಾಡಲ್ಲ ಅಂತ ತುಟಿಯನ್ನೇ ಟಚ್ ಮಾಡಿಬಿಟ್ಟೆಯಲ್ಲ, ಮೋಸ ಮೋಸ.

ಪಲ್ಲಿ : ಸೋ, ಬೆಟ್ ಕಟ್ಟಿ ನಾನು ಸೋತೆ! ತಗೋ ನೂರು ರು. ಲಲ್ಲಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+