ಭಿಕ್ಷುಕನಿಂದ ಬ್ರಾಂಚ್ ಆಫೀಸ್ ಉದ್ಘಾಟನೆ

ಆಗಾಗ ಭಿಕ್ಷುಕನೊಬ್ಬನಿಗೆ ಭಿಕ್ಷೆ ನೀಡುತ್ತಿದ್ದ ವ್ಯಕ್ತಿಗೆ ಆ ದಿನ ಒಂದು ಅಚ್ಚರಿ ಕಾದಿತ್ತು. ಭಿಕ್ಷುಕ ಎಂದಿನಂತೆ ತಾನು ಕುಳಿತಿದ್ದ ಜಾಗದಲ್ಲಿ ಒಂದು ಪಾತ್ರೆಯ ಬದಲು ಮತ್ತೊಂದು ಪಾತ್ರೆಯನ್ನು ಇಟ್ಟಿದ್ದ.

ವ್ಯಕ್ತಿ : ಏನಪ್ಪಾ, ಒಂದು ಪಾತ್ರೆಯ ಬದಲು ಎರಡು ಪಾತ್ರೆ ಇಟ್ಟಿದ್ದೀಯಲ್ಲ, ಯಾಕೆ?

ಭಿಕ್ಷುಕ : ನಿಜ ಸಾರ್, ಇತ್ತೀಚೆಗೆ ಬಿಸಿನೆಸ್ ಚೆನ್ನಾಗಿದೆ. ಆದ್ದರಿಂದ ಬ್ರಾಂಚ್ ಆಫೀಸ್ ಓಪನ್ ಮಾಡಿದ್ದೇನೆ!

***
ಮನೆಗೆ ಬೇಗನೆ ಬಂದ ಪುಟ್ಟ

ಅಮ್ಮ : ಯಾಕೋ ಪುಟ್ಟ ಶಾಲೆಯಿಂದ ಇಷ್ಟು ಬೇಗನೆ ಬಂದಿದ್ದಿಯಾ? ಶಾಲೆ ಬೇಗನೆ ಬಿಟ್ತಾ?

ಪುಟ್ಟ : ಹೌದಮ್ಮ, ಮಿಸ್ ಒಂದು ಪ್ರಶ್ನೆ ಕೇಳಿದ್ದರು. ನಾನು ಅದಕ್ಕೆ ಉತ್ತರ ಕೊಡದಿದ್ದರಿಂದ ಕ್ಲಾಸಿನಿಂದ ಹೊರಗಟ್ಟಿದರು.

ಅಮ್ಮ : ಹೌದೇನೋ? ಯಾವ ಪ್ರಶ್ನೆ ಕೇಳಿದ್ದರು?

ಪುಟ್ಟ : ಮಿಸ್ಸು, ನನ್ನ ಮೇಲೆ ಚಾಕ್‌ಪೀಲ್ ಎಸೆದದ್ದು ಯಾರೆಂದು ಕೇಳಿದ್ರು!

***
ಕಿಟಕಿಯಲ್ಲಿ ಇಣುಕುವ ಗಂಡ

ಹೆಂಡ್ತಿ : ರೀ, ಯಾಕ್ರೀ ನಾನು ಹಾಡಲು ಆರಂಭಿಸಿದ ಕೂಡಲೆ ಕಿಟಕಿಯಲ್ಲಿ ಇಣುಕುತ್ತ ನಿಲ್ಲುತ್ತೀರಿ?

ಗಂಡ : ಯಾಕಂದ್ರೆ, ಹಾಡುತ್ತಿರುವುದು ನಾನಲ್ಲ ಎಂದು ಕೇಳಿದವರಿಗೆಲ್ಲ ಮತ್ತು ನೋಡಿದವರಿಗೆಲ್ಲ ತಿಳಿಯಲಿ ಎಂದು! [ಗಂಡ ಹೆಂಡತಿ ಜೋಕ್ಸ್]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+