ಸುಬ್ಬುವಿಗೆ ಸುಬ್ಬಿ ಯಾವ ಜ್ಯೂಸ್ ಕೊಟ್ಟಳು? ಗೆಸ್
ಜಗತ್ತಿನ ಮಹಾನ್ ಮರೆಗುಳಿಗಳ ಪಟ್ಟಿ ಮಾಡಿದರೆ ಸುಬ್ರಮಣ್ಯನಗರದ ಸುಬ್ಬು ಮತ್ತು ಸೋಮವಾರಪೇಟೆಯ ಸುಬ್ಬಿ ಅಗ್ರಸ್ಥಾನ ಪಡೆಯುತ್ತಾರೆ. ಅಂದ ಹಾಗೆ, ಸುಬ್ಬ ಮತ್ತು ಸುಬ್ಬಿ ಇಬ್ಬರೂ ಕೈಕೈ ಹಿಡಿದ ದಂಪತಿಗಳು. ಇನ್ನು ಅವರಿಬ್ಬರ ಜೀವನ ಹೇಗಿರಬಹುದೆಂದು ಊಹಿಸಿಕೊಳ್ಳಿ.
ಊಹಿಸಿಕೊಳ್ಳುವ ಅಗತ್ಯವೇ ಇಲ್ಲ. ಪ್ರತಿದಿನವೂ ಒಂದಿಲ್ಲೊಂದು ವಿಷಯದಲ್ಲಿ ಇಬ್ಬರ ನಡುವೆ ಗೊಂದಲಗಳು, ಮಿಸ್ ಅಂಡರ್‌ಸ್ಟಾಂಡಿಂಗ್‌ಗಳು, ಜಗಳಾಟಗಳು ನಡೆದೇ ಇರುತ್ತವೆ. ಆದರೆ, ಇಬ್ಬರೂ ಜಗತ್ ಮರೆಗುಳಿಗಳಾಗಿರುವುದಿಂದ ಹಿಂದಿನ ಕ್ಷಣ ಏನು ನಡೆದಿದೆ ಎಂಬುದು ಮರೆತೇ ಹೋಗಿರುತ್ತದೆ. ಹಾಗಾಗಿ, ಇಬ್ಬರೂ ಸುಖವಾಗಿ ಜೀವನ ನಡೆಸುತ್ತಿದ್ದಾರೆ.
ಒಂದು ಬಾರಿ ಏನಾಯಿತೆಂದರೆ, ಸುಡುಸುಡು ಬೇಸಿಗೆಯಲ್ಲಿ ಸುಬ್ಬುವಿಗೆ ತಣ್ಣನೆಯ ಮೋಸಂಬಿ ಜ್ಯೂಸ್ ಕುಡಿಯಬೇಕೆಂದು ಆಸೆಯಾಯಿತು. ಪುಣ್ಯಕ್ಕೆ ಸುಬ್ಬಿಯ ಹೆಸರು ನೆನಪಿದ್ದರಿಂದ, ಆಕೆಯನ್ನು ಕರೆದು "ಲೇ ಸುಬ್ಬಿ, ಆರೇಂಜ್ ಜ್ಯೂಸ್ ತೆಗೆದುಕೊಂಡು ಬಾ" ಎಂದು ಕುಳಿತಲ್ಲಿಂದಲೇ ಆದೇಶ ನೀಡಿದ.
ಗಂಡನ ಆಜ್ಞೆಯನ್ನು ಶಿರಸಾವಹಿಸಿ ಪಾಲಿಸುತ್ತಿದ್ದ ಸುಬ್ಬಿ, "ತಂದೆರೀ ಆರೇಂಜ್ ಜ್ಯೂಸ್. ಐಸ್ ಇರ್ಲಾ ಬೇಡ್ವಾ, ಇರ್ಲಾ ಓಕೆ" ಎಂದು ಇನ್ನೈದು ನಿಮಿಷದಲ್ಲಿ ಥಂಡಾ ಥಂಡಾ ಸಪೋಟಾ ಜ್ಯೂಸ್ ತೆಗೆದುಕೊಂಡು ಬಂದಳು. ಸುಬ್ಬುವಿಗೆ ನಖಶಿಖಾಂತ ಉರಿದುಹೋಯಿತು.
"ಲೇ, ಏನ್ ಮರೆಗುಳಿ ಕಣೆ ನೀನು. ನಾನು ನಿನಗೆ ಐಸ್ ಕ್ರೀಂ ತೆಗೆದುಕೊಂಡು ಬಾ ಅಂತ ಹೇಳಿದ್ರೆ, ಸಪೋಟಾ ಜ್ಯೂಸ್ ತಂದಿದ್ದಿಯಾ" ಎಂದು ವಾಚಾಮಗೋಚರವಾಗಿ ಬೈದ! ಸರಿ ಎಂದು ಹೋದ ಸುಬ್ಬಿ ನಂತರ ಸುಬ್ಬುವಿಗೆ ಯಾವ ಐಟೆಂ ತಂದುಕೊಳ್ಳಲು ಗೆಸ್ ಮಾಡಿರಿ.











Click it and Unblock the Notifications