ಜೋಕ್ಸ್: ನಿರೋದ್ ಬಳಸಿ ಅಂತಾರೆ. ಬಸ್ನಲ್ಲಿ ಆಗುತ್ತಾ

ಗುಂಡ ಬಿಎಂಟಿಸಿ ಬಸ್ ನಲ್ಲಿ ಕೂತ. ಸೀಟ್ ನಲ್ಲಿ ಕೂತು ಸಿಗರೇಟ್ ಎಳೆಯೋಕೆ ಶುರು ಮಾಡಿದ.. ಅಲ್ಲಿಗೆ ಬಂದ ಕಂಡಕ್ಟರ್..
ಕಂಡಕ್ಟರ್: ಏಯ್, ಬುದ್ದಿ ಇದ್ಯಾ ನಿನಗೆ.. ಧೂಮಪಾನ ನಿಷೇಧಿಸಲಾಗಿದೆ ಎಂದು ಅಲ್ಲಿ ಬೋರ್ಡ್ ಹಾಕಿದ್ದು ಕಾಣಿಸಲ್ವಾ?
ಗುಂಡ: ಬೋರ್ಡ್ ನಲ್ಲಿ ಬರೆದಿದ್ದೆಲ್ಲಾ ಪಾಲಿಸಬೇಕಾ?
ಕಂಡಕ್ಟರ್: ಹೌದು ಮತ್ತೆ..
ಗುಂಡ: ಅಲ್ಲೇ ಇನ್ನೊಂದು ಬೋರ್ಡ್ ಇದೆ ನೋಡಿ.. ನಿರೋದ್ ಬಳಸಿ ಅಂತಾ. ಅಲ್ಲಿ ಬರೆದ ಹಾಗೆ ಬಸ್ ನಲ್ಲಿ ನಿರೋದ್ ಬಳಸೋಕೆ ಆಗುತ್ತಾ?
***
ಹುಡುಗ: ನಿನ್ನನ್ನು ಪ್ರೀತಿಸೋಕೆ ಶುರುಮಾಡಿದಾಗಿನಿಂದ ನಾನು ಸಿಗರೆಟ್ ಸೇದೋಕೆ ಆಗಿಲ್ಲ, ಕುಡಿದಿಲ್ಲ. ಏನೂ ಎಂಜಾಯ್ ಮಾಡೋಕೆ ಆಗ್ತಿಲ್ಲ.
ಹುಡುಗಿ: ನೀನು ನನ್ನ ಪ್ರೀತಿಯಲ್ಲಿ ಹುಚ್ಚನಾಗಿ ಬಿಟ್ಟಿದ್ದೀಯಾ, ಆಲ್ವಾ?
ಹುಡುಗ: ಹುಚ್ಚೂ ಇಲ್ಲ, ಏನೂ ಇಲ್ಲಾ..ನಿನ್ನ ಪ್ರೀತಿಯಲ್ಲಿ ನನ್ನ ಜೇಬಿನಲ್ಲಿ ದುಡ್ಡೇ ಉಳಿಯುತ್ತಿಲ್ಲ.
***
ಗುಂಡ ತುಂಬಾ ಬೇಸರದಲ್ಲಿದ್ದ. ಇವನನ್ನು ಮಾತನಾಡಿಸಲು ಅವನ ಸ್ನೇಹಿತ ತಿಮ್ಮ ತುಂಬಾ ಹೊತ್ತು ಕಾಯುತ್ತಿದ್ದ..
ತಿಮ್ಮ: ಯಾಕೋ ಗೆಳೆಯಾ.. ಏನಾಯ್ತು?
ಗುಂಡ: ನನ್ನನ್ನು ಕೆಲಸದಿಂದ ತೆಗೆದು ಹಾಕಿದರು..
ತಿಮ್ಮ: ಯಾಕೆ? ಕೆಲಸದಿಂದ ತೆಗೆದು ಹಾಕುವಂಥದ್ದು ಏನ್ ಮಾಡಿದೆ?
ಗುಂಡ: ನಾಟಕದ ಉಡುಪು ವೆಚ್ಚವೆಂದು 500 ರೂಪಾಯಿ ಕೇಳಿದೆ.. ಅದಕ್ಕೆ
ತಿಮ್ಮ: ಅದಕ್ಕೆ ಈ ಶಿಕ್ಷೆನಾ?
ಗುಂಡ: ಏನಿಲ್ಲ, ಆ ನಾಟಕ ರೇಡಿಯೋದಲ್ಲಿ ಪ್ರಸಾರವಾಗುತ್ತಿತ್ತು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+