ಸಂತಾ ಫ್ರೆಂಚ್ ಕಲಿಯಲು ಯಾಕೆ ಶುರು ಮಾಡಿದ?

ವೈದ್ಯ : ಯಾಕಪ್ಪಾ ಸಂತಾ, ಆರೋಗ್ಯ ಹಾಳಾಗುವಂತೆ ಯಾಕೆ ಫ್ರೆಂಚ್ ಕಲೀತಾ ಇದ್ದೀಯಾ?
ಸಂತಾ : ಯಾರೋ ಜ್ಯೋತಿಷಿಗಳು ಹೇಳಿದ್ದರು. ಸತ್ತ ಮೇಲೆ ಸ್ವರ್ಗದಲ್ಲಿ ಫ್ರೆಂಚ್ ಮಾತಾಡ್ತಾರೆ ಅಂತ. ಅದಕ್ಕೇ ಕಲಿಯಲು ಶುರು ಮಾಡಿದೆ.
ವೈದ್ಯ : ನೀನು ಸತ್ತ ಮೇಲೆ ಸ್ವರ್ಗಕ್ಕೇ ಹೋಗ್ತಿಯಂತ ಏನು ಗ್ಯಾರಂಟಿ? ನರಕಕ್ಕೆ ಹೋದರೆ?
ಸಂತಾ : ಪರವಾಗಿಲ್ಲ ಡಾಕ್ಟ್ರೆ, ನನಗೆ ಪಂಜಾಬಿ ಚೆನ್ನಾಗಿ ಬರುತ್ತದೆ.
***
ಸಂತಾ : ಯಾಕೋ ಬಂತಾ ಇಷ್ಟೊಂದು ಬೇಜಾರು ಮಾಡ್ಕೊಂಡಿದ್ದೀಯಾ? ಏನ್ ನಿನ್ನ ಪ್ರಾಬ್ಲಮ್ಮು?
ಬಂತಾ : ನನ್ನ ಬೇಜಾರಿಗೆ ಕಾರಣ ನನ್ನ ಮಗ ಮತ್ತು ಮಗಳು.
ಸಂತಾ : ಯಾಕಪ್ಪಾ ಏನಾಯ್ತು?
ಬಂತಾ : ಮಗ ದಿನಾ ಬೆಳಿಗ್ಗೆ ಎದ್ದ ಕೂಡಲೆ, ನಾನು ಕೋಂಪ್ಲಾನ್ ಬಾಯ್ ಅಂತಾನೆ. ನನ್ನ ಮಗಳು, ನಾನು ಕೋಂಪ್ಲಾನ್ ಗರ್ಲ್ ಅಂತ. ಏನು ಹೇಳುಬೇಕೋ ಗೊತ್ತಾಗುತ್ತಿಲ್ಲ.
***
ಬಂತಾ : ಮಾಣಿ, ಗಿಡಗಳಿಗೆ ಚೆನ್ನಾಗಿ ನೀರು ಹಾಕುವುದನ್ನು ಮರೆಯಬೇಡ.
ಮಾಣಿ : ಯಜಮಾನ್ರೆ, ನೋಡ್ಲಿಲ್ವಾ ಹೊರಗಡೆ ಮಳೆ ಸಖತ್ತಾಗಿ ಸುರಿಯುತ್ತಿದೆ.
ಬಂತಾ : ಪರವಾಗಿಲ್ಲ, ಕೊಡೆ ತೊಗೊಂಡು ನೀರು ಹಾಕು.












Click it and Unblock the Notifications