ಮತದಾರರಿಗೆ ನಮ್ ಸಿದ್ರಾಮಣ್ಣ ಹೇಳಿದ ಬುದ್ದಿಮಾತು

Siddaramaiah
ಗುಂಡ: ಲೇ ಕೆಂಚ, ತಿಮ್ಮ, ಸಿದ್ದ ಬನ್ರಲಾ ಒಸಿ ಇತ್ತಾ..
ತಿಮ್ಮ: ಏನ್ ಅಣ್ಣಾ.. ಚಡ್ಡಿ ಒಳ್ಗೆ ಚೇಳು ಹೋದಂಗೆ ಬಡ್ಕೊತಾ ಇದ್ದೀಯಾ?
ಗುಂಡ: ಲೇ.. ವಿಷ್ಯ ಗೊತ್ತೇನ್ಲಾ.. ನಮ್ಮ ಇರೋಧ ಪಕ್ಷದ ನಾಯಕ ಸಿದ್ರಾಮಣ್ಣ ಬಿದ್ದೋಗಿ ಬಿಟ್ರಂತ್ ಅಲ್ಲೋ ...
ತಿಮ್ಮ: ಅಯ್ಯೋ.. ಮಾದೇಶ.. ಯಾಕ್ ಹಿಂಗೆ ಮಾಡ್ಬಿಟ್ಟೆ ನಮ್ ಸಿದ್ದಣ್ಣಂಗೆ
ಗುಂಡ: ಅಯ್ಯೋ ಮೂದೇವಿ. ಬಿಡ್ತು ಅನ್ನು. ಬಡ್ಕೊಳ್ಳೊಂತಾದ್ದು ಏನೂ ಆಗಿಲ್ಲ ಬುಡ್ಲಾ..
ತಿಮ್ಮ: ಹಂಗಾದ್ರೆ ನಮ್ಮ ಸಿದ್ದಣ್ಣ ಗಟ್ಟಿಮುಟ್ಟಾಗವ್ರೆ.. ಅದಿರ್ಲಿ ಹೆಂಗಾಯ್ತು ಇದೆಲ್ಲಾ..
ಗುಂಡ: ಯಾವುದೋ ಪಿರಿವೆಟ್ ಫಂಕ್ಷನ್ ಗೆ ಹೋಗಿದ್ರಾ.. ಗರಿಗರಿ ಪಂಚೆ ಉಟ್ಕೊಂಡು, ಕಣ್ಣಾಗೆ ಒಂದು ಕೂಲಿಂಗ್ಲಾಸ್ ಹಾಕೊಂಡು ನಮ್ಮ ಕನ್ನಡ ಸಿನಿಮಾ ಹೀರೋ ಗಿಂತ ನಾನೇನು ಕಮ್ಮಿ ಅನ್ಕೊಂಡು ಹೋಗ್ತಾ ಇದ್ರಾ.. ಅದು ಯಾರ ದುಶ್ಮನ್ ಗಳ ಕಣ್ಣು ಬಿತ್ತೋ.. ಅಂಗೆ ಬಿದ್ದೊಗ್ ಬಿಟ್ರು..
ತಿಮ್ಮ: ಫಂಕ್ಷನ್ ಗೆ ಹೋಗಿದ್ರಾ.. ನಾನೇನು ಬೇರೆ ಏನೋ ಅನ್ಕೊಂಡು ಬಿಟ್ಟೆ..
ಗುಂಡ: ಏನ್ಲಾ. ಅನ್ಕೊಂಡೆ.. ಹೇಳ್ಲಾ ನಾಚ್ಕೋ.. ಬೇಡ
ತಿಮ್ಮ: ಇಲ್ಲಾ.. ಅದು ಕಮಲ ಪಕ್ಷದ ಸಚಿವರು ಅದೇನೋ ಇಧಾನಸೌಧದಲ್ಲಿ ನೋಡ್ತಾ ಸರಿಯಾಗಿ ಸಿಕ್ಕಾಕೊಂಡ್ರಲ್ಲಾ... ಅಂಗೆ ನಮ್ಮ ಸಿದ್ದಣ್ಣ ಮೊಬೈಲ್ ನಲ್ಲಿ ನೋಡ್ತಾ ನೋಡ್ತಾ.. ಬಿದ್ದೋಗಿ ಬಿಟ್ರೋ ಅನ್ಕೊಂಡೆ..
ಗುಂಡ: ಥೂ.. ಬಿಡ್ತೂ ಅನ್ಲಾ.. ಮಾನ ಮರವಾದೆಗೆ ಅಂಜುವವರು ಕಣ್ಲಾ ಅವ್ರು..ಶ್ರೀರಾಮಚಂದ್ರ ಕಣ್ಲಾ ಅವ್ರು
ತಿಮ್ಮ: ಹೆಂಗೂ ಈಗ ಕಮಲ ಪಕ್ಷದ ಮಾನ ಹರಾಜಿಗೆ ಹೋಗ ಬಿಟ್ಟೈತೆ ನಮ್ಮ ಸಿದ್ದಣ್ಣ ಈ ಘಟನೆಯನ್ನಾ ಸರಿಯಾಗಿ ತನ್ ದಾಳಕ್ಕೆ ಬಳ್ಸಿ ಕೊಳ್ ಬೇಕಣ್ಣ..
ಗುಂಡ: ಹೆಂಗ್ಲಾ.. ಸಾಧ್ಯ ಕಣಲೇ ಅದು ದಡ್ದಾ..
ತಿಮ್ಮ: ವೆರಿ ಸಿಂಪಲ್ ಅಣ್ಣಾ.. ನಮ್ಮ ಸಿದ್ರಾಮಣ್ಣ ಒಂದು ಸ್ಟೇಟ್ಮೆಂಟ್ ಒಗಾಯಿಸಿ ಬಿಟ್ರೆ ಸಾಕು..
ಗುಂಡ: ಏನೂಂತಾ. ಒಸಿ ಬಿಡ್ಸಿ ಹೇಳಲೇ..
ತಿಮ್ಮ: ನಾನು ಇಂದು ಬಿದ್ದೊಗಿದಕ್ಕೆ ಆಡಳಿತ ಪಕ್ಷದವರೇ ಕಾರಣ. ಮುಂದಿನ ಚುನಾವಣೆಯಲ್ಲಿ ಕರ್ನಾಟಕದ ಆರು ಕೋಟಿ ಮತದಾರರು ನಿಮಗೆ ಸರಿಯಾಗಿ ಬುದ್ದಿ ಕಲಿಸ್ತಾರೆ ನೋಡಿ..

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+