ನಿಮ್ಮ ಮಗ ಯಾಕೆ ನಿಮ್ಹಾನ್ಸ್ ಸೇರ್ಕೊಂಡಿದ್ದಾನೆ?

Kannada jokes for the day
ಸುರೇಶ : ಯಾಕೆ ನಿಮ್ಮ ಮಗ ಈಗ್ಲೆ ನಿಮ್ಹಾನ್ಸ್ ಸೇರ್ಕೊಂಡಿದ್ದಾನೆ? ನಿನ್ನೆ ತಾನೆ ಮಾತಾಡಿಸಿದೆ ಚೆನ್ನಾಗೇ ಇದ್ನಲ್ಲ. ಏನಾಗಿತ್ತು ಅವನಿಗೆ?

ದಿನೇಶ : ಏನು ಹೇಳೋಣ ಅವನ ಪ್ರಾಬ್ಲಮ್ಮು. ಇನ್ನೇನು ವ್ಯಾಲಂಟೈನ್ಸ್ ದಿನ ಬರ್ತಿದೆಯಲ್ಲ. ಫೆ.14ರಂದು ಲವ್ ಮಾಡಿ, ಹುಡುಗಿ ಕೈಕೊಟ್ಟು ಲವ್ ಫೇಲ್ಯೂರ್ ಆಗಿ, ಹುಚ್ಚನಾಗಿ ನಿಮ್ಹಾನ್ಸ್ ಸೇರುವ ಬದಲು ಈಗಲೇ ಸರಿಕೊಂಡರೆ ಒಳ್ಳೇದು ಅಂಬೋದು ಅವನ ಮುಂದಾಲೋಚನೆ. ಏನಂತೀರಾ?

***

ರೋಗಿ : ಡಾಕ್ಟ್ರೆ, ಹತ್ರ ಬಂದ್ರೆ ಸಾಕು, ಬಾಯಿಂದ ಗಬ್ಬು ವಾಸನೆ ಬರತ್ತೆ. ಏನು ಮಾಡೋದು?

ವೈದ್ಯ : ಮಾಡೋದೇನು, ಕೋಲ್ಗೆಟ್ ಟೂತ್ ಪೇಸ್ಟ್ ತಗೊಳ್ಳಿ. ದಿನಕ್ಕೆರಡು ಬಾರಿ ಉಜ್ಜಿರಿ.

ರೋಗಿ : ಆ ಕೆಲಸ ನೀವೇ ಮಾಡಿ ಡಾಕ್ಟ್ರೆ. ಹೊಲಸು ವಾಸ್ನೆ ಬರ್ತಿರೋದು ನಿಮ್ಮ ಬಾಯಿಂದಾನೆ!

***

ತಾತ : ಯಾರೋ ಅದು ನಿಮ್ಮ ಮೇಷ್ಟ್ರು? ಉತ್ತರ ಸರಿಯಾಗಿದ್ರೂ, ತಪ್ಪು ಹಾಕಿದ್ದಾರೆ. ಮತ್ತೆ ತಪ್ಪು ಬರೆದಿದ್ದೀಯಾ ಅಂತ ಹೊಡೆದಿದ್ದಾರೆ?

ಮೊಮ್ಮಗ : ಸರಿಯಾಗಿ ಚಚ್ಚಿಬಿಟ್ಟು, ಸೇಡು ತೀರಿಸ್ಕೋತಾ ಇದೀನಿ ಅಂದ್ರು, ತಾತಾ.

ತಾತ : ಯಾವ್ನೋ ಅವ್ನು ಮುಠಾಳ?

ಮೊಮ್ಮಗ : ಅವರು ಹಿಂದೆ ನಿಮ್ಮ ಶಿಷ್ಯರಾಗಿದ್ದರಂತೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+