ಓ ಮೈ ಗಾಡ್! ಅಂಥಾ ಕೆಲಸ ಯಾಕೆ ಬಿಟ್ಟೆ?
ಕಬ್ಬನ್ ಪಾರ್ಕಿನ ಬಾಂಬೂ ಮರಗಳ ಕಾಡಿನ ನಡುವೆ ಚೆಲುವೆ, ಚೆಲುವರಿಬ್ಬರೂ ಕೈಯಲ್ಲಿ ಕೈಹಿಡಿದು ಮಾತಾಡ್ತಾ ಕುಳಿತಿರ್ತಾರೆ... ಚೆಲುವೆ ವೈಯಾರದಿಂದ,
ಚೆಲುವೆ : ಈಗ ಏನು ಮಾಡ್ತಾ ಇದ್ದಿಯಾ, (ತಡೆದು) ಕೈಹಿಡ್ಕೊಂಡಿದ್ದೀನೀ ಅನ್ಬೇಡಾ. ಕೆಲಸ ಏನ್ ಮಾಡ್ತಾ ಇದ್ದೀಯಾ?
ಚೆಲುವ : ಟೈಮ್ಸಾಫಿಂಡಿಯಾದಲ್ಲಿ ಕೆಲಸ ಮಾಡ್ತಿದ್ದೆ, ಈಗ ಬಿಟ್ಬಿಟ್ಟೆ.
ಚೆಲುವೆ : ಓ ಮೈ ಗಾಡ್! (ಕೈ ಸೆಳೆದುಕೊಂಡು) ಅಂಥಾ ಉತ್ತಮವಾದ ಕೆಲಸ ಯಾಕೆ ಬಿಟ್ಟೆ?
ಚೆಲುವ : ಅಯ್ಯೋ, ಯಾರಿಗೆ ಬೇಕು ದಿನಾ ಬೆಳಿಗ್ಗೆ ಎದ್ದು ಪೇಪರ್ ಹಾಕುವ ಕೆಲಸ! (ಹುಡುಗಿ ಪರಾರಿ)
***
ಸೆಕ್ಸ್ ಅನ್ನುವುದು ಸಂಬಳವಿದ್ದಂತೆ. ಹ್ಯಾಗೆ ಅಂತೀರಾ? ಈ ವಿಷಯದಲ್ಲಿ ಪ್ರತಿಯೊಬ್ಬರೂ ಅಲ್ಪತೃಪ್ತರು. ಯಾರೂ ತಮ್ತಮ್ಮ ಅನುಭವ ಇತರರೊಂದಿಗೆ ಹಂಚಿಕೊಳ್ಳುವುದಿಲ್ಲ. ಪ್ರತಿಯೊಬ್ಬರೂ ಇತರರಿಗೆ ತಮಗಿಂತೆ ಹೆಚ್ಚಾಗಿಯೇ ಸಿಗುತ್ತದೆ ಎಂದು ವಿಚಾರ ಮಾಡ್ತಿರ್ತಾರೆ, ಆಮ್ ಐ ರೈಟ್?
***
ಕರ್ನಾಟಕದಲ್ಲಿ 14 ನದಿಗಳು, 354 ಅಣೆಕಟ್ಟುಗಳು, 6568 ಕೆರೆಗಳು, 13059 ಬೋರ್ ವೆಲ್ ಗಳು.... ದೇವ್ರೆ, ಎಷ್ಟೊಂದು ನೀರಿನ ಅನುಕೂಲವಿದೆ... ಹಠ ಮಾಡದೆ ದಿನಾ ಸ್ನಾನ ಮಾಡಿ!











Click it and Unblock the Notifications