ಗರ್ಲ್ ಫ್ರೆಡ್ ಈಸ್ ಸ್ವೀಟ್, ಆದ್ರೆ ಹೆಂಡತೀನೆ ವಾಸಿ

ಗುಂಡ ಮತ್ತು ಗುಂಡಿಯ ನಡುವೆ ಯಾವುದೋ ವಾದವಿವಾದ ಬೆಳೆದು ಗುಂಡ ತನ್ನ ಪತ್ನಿ ಗುಂಡಿ ಕೆನ್ನೆಗೆ ಎರಡು ಹೊಡೀತಾನೆ. ಇದರಿಂದ ನೊಂದ ಗುಂಡಿ ಕಣ್ಣೀರಿಡುತ್ತಿದ್ದಾಗ..
ಗುಂಡ: ಬೇಜಾರ್ ಮಾಡಿ ಕೊಳ್ಳ ಬೇಡ.. ಕೆನ್ನೆಗೆ ಹೊಡೆಯೋದು ಪ್ರೀತಿಯ ಸಂಕೇತ..
ಈ ಮಾತು ಕೇಳಿ ತಕ್ಷಣ ಎದ್ದ ಗುಂಡಿ.. ತನ್ನ ಪತಿ ಗುಂಡನ ಕೆನ್ನೆಗೆ ಹೊಡೆದು..
ಗುಂಡಿ: ನನಗೇನೂ ನಿಮ್ಮ ಮೇಲೆ ಪ್ರೀತಿ ಇಲ್ಲಾ ಅನ್ಕೊಂಡ್ರಾ..
***
ಟೀಚರ್: ಮಕ್ಕಳೇ, ನಿಮ್ಮಲ್ಲಿ ಚಂದ್ರಯಾನಕ್ಕೆ ತೆರಳಲು ಯಾರಿಗೆ ಆಸಕ್ತಿಯಿದೆ. ಆಸಕ್ತಿ ಇರುವವರು ಕೈಯೆತ್ತಿ.
ಎಲ್ಲಾ ಮಕ್ಕಳೂ ಕೈ ಎತ್ತಿದರೂ ಮರಿಗುಂಡ ಮಾತ್ರ ಕೈಯೆತ್ತಲಿಲ್ಲ..
ಟೀಚರ್: ಯಾಕೋ ಮರಿಗುಂಡ.. ನಿನಗೆ ಚಂದ್ರಯಾನಕ್ಕೆ ಹೋಗಲು ಆಸಕ್ತಿ ಇಲ್ವಾ?
ಮರಿಗುಂಡ: ಇಲ್ಲಾ ಟೀಚರ್..
ಟೀಚರ್: ಯಾಕೆ?
ಮರಿಗುಂಡ:
ಅಮ್ಮಾ ಹೇಳಿದ್ದಾಳೆ, ಸ್ಕೂಲಿನಿಂದ ಡೈರೆಕ್ಟ್ ಮನೆಗೆ ಬಾ.. ಇಲ್ಲಾಂದ್ರೆ ನಿನ್ನ ಕೈಕಾಲು ಮುರ್ದು ಹಾಕ್ತೀನಿಂತಾ.
***
ಗುಂಡ: ಗರ್ಲ್ ಫ್ರೆಂಡ್ ಗಿಂತ ಹೆಂಡತೀನೆ ವಾಸಿ..
ತಿಮ್ಮ: ಹೇಗೆ?
ಗುಂಡ: ಗರ್ಲ್ ಫ್ರೆಂಡ್ ಅಂದ್ರೆ ಮಸಾಲಪುರಿ, ಪಿಜ್ಜಾ ಇದ್ದ ಹಾಗೆ.. ಸಹವಾಸ ರುಚಿಯಾಗಿ, ಸ್ಪೈಸಿಯಾಗಿರುತ್ತೆ.
ತಿಮ್ಮ: ಮತ್ತೆ ಹೆಂಡತಿ?
ಗುಂಡ: ರಾಗಿ ಮುದ್ದೆ ಇದ್ದ ಹಾಗೆ.. ಸಹವಾಸ ಅಷ್ಟು ರುಚಿಯಾಗಿರಲ್ಲಾ ಆದ್ರೆ ಜೀವಕ್ಕೆ ಒಳ್ಳೇದು..

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+