ಮೊದಲರಾತ್ರಿಯ ದಿನ ಹೆಂಡತಿ ಗಂಡನಿಗೆ ಹೇಳುತ್ತಾಳೆ..
ಮೊದಲರಾತ್ರಿಯ ದಿನ ಹೆಂಡತಿ ಹೆದರಿಕೊಂಡು ಗಂಡನಿಗೆ ಹೇಳುತ್ತಾಳೆ..
ಹೆಂಡತಿ: ನೋಡಿ.. ನೀವು ನನ್ನ ಮೈ ಮುಟ್ಟ ಬೇಡಿ..
ಗಂಡ: ವಾಟ್ ಇಸ್ ದಿಸ್, ಯಾಕೆ ?
ಹೆಂಡತಿ: ನಾನು ನನ್ನ ಅಮ್ಮನಿಗೆ ಪ್ರಾಮಿಸ್ ಮಾಡಿದ್ದೀನಿ..
ಗಂಡ: ಏನೂಂತಾ..
ಹೆಂಡತಿ: ಮದುವೆ ಆದ ಮೇಲೆ ನಾನು ಬೇರೆವರು ಹತ್ರ ಮೈ ಮುಟ್ಟಿಸಿ ಕೊಳ್ಳಲಾಂತ..
***
ನೇಪಾಳಿ: ಸಾಬ್ಜಿ.. ಇಲ್ಲಿ ಶ್ಯಾಮ್ ಸಿಂಗ್ ಮೊಬೈಲ್ ಎಲ್ಲಿ ಸಿಗುತ್ತೆ?
ಅಂಗಡಿಯವ: ಗೊತ್ತಿಲ್ಲಪ್ಪಾ..
ನೇಪಾಳಿ: ಆದ್ರೆ ಸಾಬ್ಜಿ, ಇವತ್ತಿನ ನ್ಯೂಸ್ ಪೇಪರ್ ಜಾಹೀರಾತಿನಲ್ಲಿ ನಿಮ್ಮ ಅಂಗಡಿಯಲ್ಲಿ ಸಿಗುತ್ತೆ ಅಂತಾ ಇದೆ..
ಅಂಗಡಿಯವ: ಲೋ ಮೂರ್ಖ.. ಅದು ಶ್ಯಾಮ್ ಸಿಂಗ್ ಅಲ್ಲಾ.. ಸ್ಯಾಮ್ಸಂಗ್ ತಿಳಿತಾ..
***
ಗುಂಡಿ: ರೀ...ನನಗೆ ತುಂಬಾ ತಲೆ ಬಿಸಿಯಾಗಿದೆ..
ಗುಂಡ: ಯಾಕೆ ಏನಾಯಿತು?
ಗುಂಡಿ: ಮರಿಗುಂಡ ತುಂಬಾ ದುಡ್ಡು ಖರ್ಚು ಮಾಡುತ್ತಾನೆ.. ದುಡ್ಡನ್ನು ಎಲ್ಲಿ ಬಚ್ಚಿಟ್ಟರೂ ಎತ್ಕೊಂಡು ಹೋಗ್ತಾನೆ.
ಗುಂಡ: ಒಂದು ಒಳ್ಳೆ ಐಡಿಯಾ
ಗುಂಡಿ: ಏನದು?
ಗುಂಡ: ಅವನ ಸ್ಕೂಲ್ ಬುಕ್ ನಲ್ಲಿ ಇಡು, ಹೇಗೂ ಎಕ್ಷಾಮ್ ಶುರುವಾಗುವ ತನಕ, ಬುಕ್ ಮುಟ್ಟಿ ನೋಡಲ್ಲಾ ಅವ್ನು..











Click it and Unblock the Notifications