ಈ ಎಸ್ಎಮ್ಎಸ್ ಓದಿ ನಿಮಗೂ ಹುಚ್ಚು ಹಿಡಿದೀತು!

ಮೊಬೈಲ್ ಮುಖಾಂತರ ವಿಶ್ವಪರ್ಯಟನ ಮಾಡುತ್ತ ಓದಿದವರನ್ನೆಲ್ಲಾ ಹುಚ್ಚು ಹಿಡಿಸುತ್ತಿರುವ ಎಸ್ಎಮ್ಎಸ್ ಹೀಗಿದೆ...

ವೈದ್ಯ : ಸುಬ್ಬು ಅವರೆ, ನಿಮಗೆ ಹೇಗೆ ಹುಚ್ಚು ಹಿಡಿಯಿತು?
ಸುಬ್ಬು : ನಾನು ಒಬ್ಬಳು ವಿಧವೆಯನ್ನು ಮದುವೆಯಾದೆ. ಪ್ರಾಯಕ್ಕೆ ಬಂದ ಅವಳ ಮಗಳನ್ನು ನನ್ನ ಅಪ್ಪ ಆಸೆಪಟ್ಟು ಮದುವೆಯಾದ. ಹಾಗೆ ನನ್ನಪ್ಪ ಅವನ ಹೆಂಡತಿಗೆ ತಾತನಾದ. ಈ ತರಹ ನನ್ನ ತಂದೆ ನನಗೆ ಅಳಿಯ ಆದ, ನನ್ ಮಗಳು ನನಗೆ ಅಮ್ಮ ಆದಳು, ಅವರಿಗೆ ಮಗು ಆದಾಗ ಅದು ನನ್ನ ತಂಗಿ ಆಯಿತು, ಆದರೆ ನಾನು ಅದರ ತಾತ ಆದೆ, ಹಾಗೆ ನನ್ನ ಮಗ ಅವನ ಅಜ್ಜಿಗೆ ತಮ್ಮನಾದ, ಹಾಗೆ ನಾನೇ ನನ್ನ ಮಗನಿಗೆ ಅಳಿಯನಾದೆ, ಹಾಗೆ ನನ್ ಮಗ ಅವನ ತಂದೆಗೆ ಭಾವ ಆದ, ಹಾಗೆ ನನ್....
ವೈದ್ಯ : ಉಸ್ಸಪ್ಪ! ಸಾಕು ಸಾಕು ನನಗೂ ಲೈಟಾಗಿ ಹುಚ್ಚು ಹಿಡೀತಾ ಇದೆ ಅನ್ಸತ್ತೆ...!

***
ರಾವಣ : ಸಿಗರೇಟ್ ಇದೆಯಾ?
ಹನುಮಾನ್ : ಇಲ್ಲಾ..
ರಾಮಚಂದ್ರ : ಒಂದು ಪ್ಯಾಕೆಟ್ ಇರಬೇಕಲ್ವ?
ಹನುಮಾನ್ : ನೀವು ಸುಮ್ನಿರಿ ಪ್ರಭು.. ಆ ರಾವಣನಿಗೆ ಹತ್ತು ತಲೆ ಇಲ್ವಾ, ಒಂದು ಸಲ ಕೊಟ್ಟಾಗ ಒಂದು ಪ್ಯಾಕೇ ಖಾಲಿ ಆಗುತ್ತೆ!

***
ಮರಿಗುಂಡ : ಅಪ್ಪಾ ಅಪ್ಪ.. ನನಗೆ ಪಿಟೀಲು ಕೊಡಿಸು.
ಗುಂಡ : ಆಗಲ್ಲಾ.. ಪಿಟೀಲು ಕೊಡಿಸಿದ್ರೆ ನೀನು ಎಲ್ಲರಿಗೂ ಡಿಸ್ಟರ್ಬ್ ಮಾಡ್ತೀಯಾ.
ಮರಿಗುಂಡ : ಇಲ್ಲಾ ಅಪ್ಪಾ. ಎಲ್ರೂ ಮಲಗಿದ ಮೇಲೆ ಪಿಟೀಲ್ ಬಾರಿಸ್ತೀನಿ.

***
ಗುಂಡ ಹಿಂದೂ ಮಿಲಿಟರಿ ಹೋಟೆಲ್ ನಲ್ಲಿ ಒಂದು ಕೋಳಿ ಜೊತೆ ಸೇರಿ ಊಟ ಮಾಡುತ್ತಿದ್ದ. ರೋಟಿಯಲ್ಲಿ ಒಂದು ಭಾಗ ತಾನು ತಿನ್ನುತ್ತಿದ್ದ, ಇನ್ನೊಂದು ಭಾಗ ಕೋಳಿಗೆ ತಿನಿಸುತ್ತಿದ್ದ..
ಸಪ್ಲೈರ್ : ಸಾರ್, ಇದೇನು ನೀವು ಮಾಡ್ತಾ ಇರೋದು?
ಗುಂಡ : ನಾನು ರೋಟಿ ಜೊತೆ ಚಿಕನ್ ತಿನ್ತಾ ಇದ್ದೀನಿ. ಡೋಂಟ್ ಡಿಸ್ಟರ್ಬ್ ಮಿ!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+