ಕಳ್ಳ ಮೊಬೈಲ್ ಕದ್ರೂ ಗುಂಡ ಯಾಕೆ ನಗ್ತಿದ್ದ?

Kannada jokes for the day
ಕಳ್ಳ ಗುಂಡನ ಮೊಬೈಲ್ ಕಿತ್ಕೊಂಡು ಪರಾರಿ ಆಗುತ್ತಾನೆ. ಆದರೆ ಗುಂಡ ನಕ್ಕೊಂಡೆ ಇರ್ತಾನೆ..
ತಿಮ್ಮ : ಕಳ್ಳ ಮೊಬೈಲ್ ಕದ್ದು ಓಡ್ತಾ ಇದ್ದಾನೆ.. ನೀನು ನೋಡಿದ್ರೆ ನಗ್ತಾ ಇದ್ದೀಯಾ?
ಗುಂಡ : ಓಡಲಿ ಬಿಡೋ, ಮೊಬೈಲ್ ಚಾರ್ಜರ್ ನನ್ನತ್ರ ಇದೆ!

***
ಗುಂಡ ತನ್ನ ಹೆಂಡತಿಯ ಬಳಿ..
ಗುಂಡ : ಗುಂಡಿ, ನಿನ್ನ ತಂದೆ ಇನ್ನೂ ತಮಾಷೆ ಮಾಡೋದು ಬಿಟ್ಟಿಲ್ಲ.
ಗುಂಡಿ : ಯಾಕೆ ಏನಾಯಿತು?
ಗುಂಡ : ನನ್ನ ಮಗಳನ್ನು ಮದುವೆಯಾಗಿ ನೀನು ಖುಷಿಯಾಗಿದ್ದೀಯಾ ಅಂತಾರೆ..

***
ಗುಂಡ ಕಪ್ಪು ಬಲ್ಬ್ ತೆಗೊಳ್ಳಲು ಅಂಗಡಿಗೆ ಹೋಗುತ್ತಾನೆ.
ಗುಂಡ : ಸ್ವಾಮಿ.. ಒಂದು ಕಪ್ಪು ಬಲ್ಬ್ ಕೊಡಿ.
ಅಂಗಡಿಯವ : ಕಪ್ಪು ಬಲ್ಬಾ..? ಅದನ್ನು ತೆಗೊಂಡು ಏನ್ ಮಾಡ್ತೀರ?
ಗುಂಡ : ಮಧ್ಯಾಹ್ನ ನಿದ್ದೆ ಮಾಡಬೇಕು, ಸೂರ್ಯನ ಬಿಸಿಲು ಇರುತ್ತಲ್ಲಾ. ರೂಂ ಕತ್ತಲು ಮಾಡೋಣಾಂತ!

***
ಗುಂಡ : ನಾನು ಇವತ್ತು ಒಬ್ಬನ ಜೀವ ಉಳಿಸಿದೆ.
ತಿಮ್ಮ : ಹೌದಾ.. ಏನ್ ಮಾಡ್ದೆ ?
ಗುಂಡ : ಭಿಕ್ಷುಕನ ಬಳಿ ಹೋಗಿ, ನಿನಗೆ ಸಾವಿರ ರೂಪಾಯಿ ಕೊಟ್ಟರೆ ಏನ್ ಮಾಡ್ತೀಯಾಂತ ಕೇಳ್ದೆ.
ತಿಮ್ಮ : ಅದಕ್ಕೆ ಅವನು ಏನ್ ಹೇಳ್ದ..
ಗುಂಡ : ನಿಶ್ಚಿಂತೆಯಿಂದ ಸಾಯುತ್ತೇನೆ ಅಂದ. ಅದಕ್ಕೆ ದುಡ್ಡು ಕೊಡದೆ ವಾಪಾಸ್ ಬಂದು ಅವನ ಪ್ರಾಣ ಉಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+