ಈಶ್ವರನ ತ್ರಿಶೂಲ ತಗೊಂಡ ಗಣೇಶ ಎಲ್ಲಿಗೋದ?

ಪಾರ್ವತಿ : ಗಣೇಶ ತೆಗೊಂಡು ಹೋದಾ.
ಈಶ್ವರ : ಏನಕ್ಕೆ ತೆಗೊಂಡ?
ಪಾರ್ವತಿ : ಮ್ಯಾಗಿ ತಿನೂಕೆ!
***
ವೈದ್ಯ ರೋಗಿಗೆ : ಏನಪ್ಪಾ, ಎರಡು ವರ್ಷದಿಂದ ನಮ್ಮ ಆಸ್ಪತ್ರೆಗೆ ಬರ್ತಾ ಇದ್ದೀಯಾ. ಏನಾದರೂ ಅಭಿವೃದ್ದಿ ಕಾಣಿಸುತ್ತಾ?
ರೋಗಿ : ಹೌದು ಡಾಕ್ಟರ್.
ವೈದ್ಯ : ಏನು ಅಭಿವೃದ್ದಿ?
ರೋಗಿ : ಅದೇ ಡಾಕ್ಟರ್, ನಿಮ್ಮ ಆಸ್ಪತ್ರೆಯ ನರ್ಸ್ ಲೈಲಾ ಗರ್ಭದಲ್ಲಿ!
***
ಟೀಚರ್ : ಯಾಕೋ ಮರಿಗುಂಡ.. ಯಾವಾಗಲೂ ನಗ್ತಾ ಇರ್ತೀಯಾ?
ಮರಿಗುಂಡ : ಸುಮ್ನೆ ಟೀಚರ್.
ಟೀಚರ್ : ಯಾವಾಗಲೂ ನಗುವವರನ್ನು ಏನೂಂತ ಕರೀತಾರೆ ಗೊತ್ತಾ?
ಮರಿಗುಂಡ : ಸದಾನಂದ ಗೌಡ ಅಂತಾ ಟೀಚರ್.
***
ಸಾಧು ಕೋಕಿಲ ಮಗ : ಅಪ್ಪಾ.. ಅಪ್ಪಾ.. 1+1 ಎಷ್ಟಪ್ಪಾ?
ಸಾಧುಕೋಕಿಲ : ಅಯ್ಯೋ..ಲೇ. ಗೂಬೆ ನನ್ ಮಗನೆ.. ನಾಲಾಯಕ್ ನನ್ ಮಗನೆ.. ಸ್ಕೂಲಿಗೆ ಕತ್ತೆ ಕಾಯೋಕೆ ಹೋಗ್ತೀಯಾ.. ಹೋಗೋ ಕ್ಯಾಲ್ಕುಲೇಟರ್ ತಗೊಂಡು ಬಾ ಹೇಳ್ತೀನಿ.












Click it and Unblock the Notifications