ನಿನಗೆ ತುಂಬಾ ಚಳಿಯಾದರೆ ಏನು ಮಾಡ್ತೀಯಾ?
ತಿಮ್ಮ : ನಿನಗೆ ತುಂಬಾ ಚಳಿಯಾದರೆ ಏನು ಮಾಡ್ತೀಯಾ?
ಗುಂಡ : ಹೀಟರ್ ಹತ್ರ ಹೋಗ್ತೀನಿ..
ತಿಮ್ಮ : ಇನ್ನೂ ಜೋರು ಚಳಿಯಾದರೆ?
ಗುಂಡ : ಹೀಟರ್ ಆನ್ ಮಾಡ್ತೀನಿ.
***
ಗುಂಡ ಒಂದೇ ಉಸಿರಲ್ಲಿ ಪೊಲೀಸ್ ಸ್ಟೇಶನ್ ಗೆ ಓಡೋಡಿ ಬಂದು...
ಗುಂಡ : ಸಾರ್ ನನ್ನನ್ನು ಅರೆಸ್ಟ್ ಮಾಡಿ, ನಾನು ದೊಣ್ಣೆಯಿಂದ ನನ್ನ ಹೆಂಡತಿ ತಲೆಗೆ ಹೊಡೆದೆ.
ಪೊಲೀಸ್ : ವಾಟ್? ನಿನ್ನ ಹೆಂಡತಿ ಸತ್ತು ಹೊದ್ಲೇ?
ಗುಂಡ : ಇಲ್ಲಾ ಸಾರ್, ಅದಕ್ಕೇ ಅರೆಸ್ಟ್ ಮಾಡಿ ಅಂದಿದ್ದು. ಮನೆಗೆ ಹೋದ್ರೆ ಈಗ ಅವಳ ಸರದಿ.
***
ಗುಂಡ : ಮಗನೆ, ಇಂಗ್ಲಿಷ್ ಟೆಸ್ಟ್ ನಲ್ಲಿ ಎಷ್ಟೋ ಮಾರ್ಕ್ಸ್ ಬಂತು?
ಮರಿಗುಂಡ : ಅಪ್ಪಾ. ಮರಿತಿಮ್ಮನಿಗಿಂತ ಬರೀ 20 ಮಾರ್ಕ್ಸ್ ಕಮ್ಮಿ ಬಂತಪ್ಪ..
ಗುಂಡ : ಮರಿತಿಮ್ಮ ಎಷ್ಟು ಮಾರ್ಕ್ಸ್ ತೆಗೊಂಡ?
ಗುಂಡ : 20.
***
ಗುಂಡ : ಮುಂದಿನ ಜನ್ಮದಲ್ಲಿ ನೀನು ಏನು ಆಗಬೇಕೆಂದು ಬಯಸುತ್ತೀಯಾ?
ತಿಮ್ಮ : ಜಿರಳೆ
ಗುಂಡ : ಅದ್ಯಾಕೆ ಜಿರಳೆ?
ತಿಮ್ಮ : ಅದಕ್ಕೊಂದೇ ಕಣೋ ನನ್ನ ಹೆಂಡತಿ ಭಯ ಪಡೋದು.












Click it and Unblock the Notifications