ನಾನು ನಿನಗೆ ಕೋಳಿ ತರಾ ಕಾಣಿಸ್ತೀನಾ?
ಮರಿಗುಂಡ : ಟೀಚರ್ ನೀವು ಕೋಳೀನಾ?
ಟೀಚರ್ : ಸ್ಟುಪಿಡ್, ನಾನು ನಿನಗೆ ಕೋಳಿ ತರಾ ಕಾಣಿಸ್ತೀನಾ?
ಮರಿಗುಂಡ : ಹಾಗಿದ್ರೆ.. ನೀವು ಎಲ್ಲಾ ಎಕ್ಸಾಮ್ ನಲ್ಲಿ ಯಾಕೆ ನನ್ನ ಪೇಪರ್ ನಲ್ಲಿ ಮೊಟ್ಟೆ ಇಡ್ತೀರ?
***
ದೇವರು : ನಿನಗೆ ಏನು ಬೇಕು?
ಮರಿತಿಮ್ಮ : ನನಗೆ ಸುಂದರವಾದ ಹುಡುಗಿ ಬೇಕು.
ದೇವರು : ಮುಸ್ಲಿಂ ಆದ್ರೆ ಕತ್ರಿನಾ, ಹಿಂದೂ ಆದ್ರೆ ಕರೀನಾ, ಕ್ರಿಶ್ಚಿಯನ್ ಆದರೆ ಜೆನಿಲಿಯಾ. ಏನು ನಿನ್ನ ಹೆಸರು?
ಮರಿತಿಮ್ಮ : ಅಬ್ದುಲ್ ವಿಜಯ್ ಫೆರ್ನಾಂಡಿಸ್..
ದೇವರು : ಬಹಳ ಚಾಲೂ ಇದಿಲೇ ಮಗನಾ.. ನಿನಗೆ ರಾಖಿ ಸಾವಂತ್ ಸರಿ.. ತೆಗೋ..
***
ತಿಮ್ಮ : ಹೆಂಡತಿ ಮತ್ತು ಪ್ರೇಯಸಿಗೆ ಏನು ವ್ಯತ್ಯಾಸ?
ಗುಂಡ : ಪೋಸ್ಟ್ ಪೈಡ್ ಮತ್ತು ಪ್ರಿ-ಪೈಡ್
ತಿಮ್ಮ : ಮತ್ತೆ ಸ್ಟೆಪ್ನಿ?
ಗುಂಡ : ಕಾಯಿನ್ ಬೂತ್
***
ಮರಿಗುಂಡ ಕ್ಲಾಸ್ ನಲ್ಲಿ ಲಾಸ್ಟ್ ಬೆಂಚ್ ನಲ್ಲಿ ಕೂತಿದ್ದ. ಯಾವತ್ತೂ ಲಾಸ್ಟ್ ಬೆಂಚ್ ನಲ್ಲಿ ಕೂರದ ಇವನನ್ನು ಕಂಡು ಟೀಚರ್ ಗೆ ಆಶ್ಚರ್ಯ..
ಟೀಚರ್ : ಯಾಕೋ.. ಲಾಸ್ಟ್ ಬೆಂಚ್ ನಲ್ಲಿ ಕೂತಿದ್ದೀಯಾ?
ಮರಿಗುಂಡ : ನಾನು ಏನೂ ಮಾಡಿಲ್ಲಾಂದ್ರೆ.. ನನಗೆ ಪನಿಷ್ಮೆಂಟ್ ಕೊಡಬಾರದು ತಾನೇ?
ಟೀಚರ್ : ಹೌದು ಖಂಡಿತಾ.
ಮರಿಗುಂಡ : ಹೌದಲ್ವಾ. ನಾನು ಹೋಂ ವರ್ಕ್ ಮಾಡಿಲ್ಲಾ.











Click it and Unblock the Notifications