ಅತ್ತೆ ಡಿಮ್ಯಾಂಡಿಂಗ್ ಸೊಸೆ ಕಮಾಂಡಿಂಗ್!

ಅತ್ತೆ : ಹುಡುಗಿ ಚೆನ್ನಾಗಿರಬೇಕು.. ಹಣ ಇರ್ಬೇಕು, ಓದಿರಬೇಕು.. ಚಿಕ್ಕ ಪ್ರಾಯ, ಕಮ್ಮಿ ಮಾತು, ಮನೆ ಕೆಲಸ ಮಾಡಬೇಕು..
ಸೊಸೆ : ಅತ್ತೆ ಫೋಟೋ ಫ್ರೇಮ್ ಒಳಗೆ ಇರಬೇಕು..
***
ಗುಂಡ ಪೊಲೀಸರಿಗೆ ಫೋನ್ ಮಾಡಿ...
ಗುಂಡ : ಸಾರ್.. ನನ್ನ ಅಜ್ಜನನ್ನು ಕಟ್ಟಿ ಹಾಕಿ ಬೆಂಕಿ ಕೊಡ್ತಿದ್ದಾರೆ..
ಪೊಲೀಸ್ : ಓ.. ದೇವ್ರೇ.. ನಾನು ಈಗಲೇ ಬರ್ತೀನಿ.. ಎಲ್ಲಿ ಬೆಂಕಿ ಕೊಡ್ತಿದ್ದಾರೆ..
ಗುಂಡ : ಸ್ಮಶಾನದಲ್ಲಿ..
***
ತಿಮ್ಮ : ಯಾಕೋ.. ಗುಂಡ.. ನಿನ್ನ ಮದುವೆಗೆ ಅಪ್ಪ ಅಮ್ಮ ಬಂದಿಲ್ಲ..
ಗುಂಡ : ಸೇಡು ಕಣೋ ಸೇಡು..
ತಿಮ್ಮ : ಯಾಕಪ್ಪಾ.
ಗುಂಡ : ಮತ್ತಿನ್ನೇನು.. ಅವ್ರ ಮದುವೆಗೆ ನನ್ನ ಕರ್ದ್ರಾ? ಅದಕ್ಕೆ ಕರ್ದಿಲ್ಲಾ.
***
ಗುಂಡ : ಲೋ ತಿಮ್ಮ.. ಇವತ್ತು ಏನು ತಿನ್ನೋಣ?
ತಿಮ್ಮ : ಇವತೂ ಫಿಶ್ ಫ್ರೈ ತಿನ್ನೋಣ..
ಗುಂಡ : ಅದರಲ್ಲಿ ಮುಳ್ಳು ಇರುತ್ತಪ್ಪಾ.
ತಿಮ್ಮ : ಪರವಾಗಿಲ್ಲ.. ಚಪ್ಪಲಿ ಹಾಕೊಂಡು ತಿನ್ನೋಣ..












Click it and Unblock the Notifications