ಮಿಡಿ ಬಗ್ಗೆ ಆಡಿದ ಗುಂಡಿ ಮೇಲೆ ಗುಂಡ ಸಿಡಿಮಿಡಿ

Kannada jokes for the day
ಗಡಿಬಿಡಿ ಗುಂಡಿ : ರೀ..ಮಾವಿನಕಾಯಿ ಉಪ್ಪಿನಕಾಯಿ ಖಾಲಿಯಾಗಿದೆ. ಮಿಡಿ ಹಾಕಿ ರೆಡಿ ಮಾಡ್ಲಾ?
ಸಿಡಿಮಿಡಿ ಗುಂಡ : ಅದಕ್ಕೆ ಯಾಕೆ ಮಿಡಿ ಹಾಕೊಂಡು ಮಾಡಬೇಕು? ಸೀರೆ ಉಟ್ಕೊಂಡೇ ಉಪ್ಪಿನಕಾಯಿ ಮಾಡು!

***
ತಿಮ್ಮ : ಲೋ ಗುಂಡ.. ಕಾಪಿ ಹೊಡೆಯೋದರ ಬಗ್ಗೆ ಒಂದು ಒಳ್ಳೆ ಉದಾಹರಣೆ ಹೇಳು..
ಗುಂಡ : ಸತ್ತ ಮೇಲೆ ಎಲ್ಲರಿಗೂ ದೇವ್ರು ಅವರವರ ತಪ್ಪನ್ನು ಪಟ್ಟಿ ಮಾಡಲು ಹೇಳುತ್ತಾರೆ. ಪಕ್ಕದಲ್ಲಿದ್ದ ಇನ್ನೊಬ್ಬ ಹೇಳುತ್ತಾನೆ "ಲೋ ಏನು ಬರೆದಿದ್ದೀಯಾ ತೋರ್ಸು!"

***
ಗುಂಡನಿಗೆ ನಾಲ್ಕು ಜನ ಮಕ್ಳು... ಅದರಲ್ಲಿ ಒಂದು ಎಲ್ಲರಂತೆ ಹೋಲುತ್ತಿರಲಿಲ್ಲ.. ಗುಂಡನಿಗೆ ಸಂಶಯ.. ಗುಂಡನ ಮಡದಿ ತೀವ್ರ ಜ್ವರದಿಂದ ಹಾಸಿಗೆ ಹಿಡಿದ್ದಿದಳು..
ಗುಂಡ : ಈಗಲಾದರೂ ನಿಜ ಹೇಳು.. ಈ ಮಗು ಯಾರದ್ದು?
ಗುಂಡಿ : ರೀ.. ನಿಜವಾಗ್ಲೂ ಇದೊಂದೆರೀ.. ನಿಮ್ಮ ನಿಜವಾದ ಮಗು!

***
ಮರಿಗುಂಡ ಸೈಕಲ್ ಓಡಿಸುವಾಗ ಹುಡುಗಿಗೆ ಗುದ್ದುತ್ತಾನೆ..
ಹುಡುಗಿ : ಬೆಲ್ ಹೊಡಿಬಾರದಾ?
ಮರಿಗುಂಡ : ಇಡೀ ಸೈಕಲ್ ನಿನಗೇ ಹೊಡೆದಿದೆ.. ಬೆಲ್ ಬೇರೆ ಹೊಡಿಬೇಕಾ?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+