ಸುಮ್ನಿರಿ ಮ್ಯಾಮ್, ಮೊದ್ಲು ಜೋಕ್ ಮಾಡಿದ್ದು ಯಾರು?

ಮರಿಗುಂಡ : ಮ್ಯಾಮ್.. 100% ಬರೋ ಹಾಗೆ ಟ್ರೈ ಮಾಡ್ತೀನಿ ಮ್ಯಾಮ್..
ಟೀಚರ್ : ಲೇ, ಸುಮ್ನೆ ಜೋಕ್ ಮಾಡ್ಬೇಡಪ್ಪಾ..
ಮರಿಗುಂಡ : ಸುಮ್ನಿರಿ ಮ್ಯಾಮ್.. ಮೊದ್ಲು ಜೋಕ್ ಮಾಡಿದ್ದು ಯಾರು?
***
ಗುಂಡಿ : ರೀ.. ಒಂದು ವೇಳೆ ನಾನು ನಿಮ್ಮನ್ನು ಬಿಟ್ಟು ದೂರ ಹೋದರೆ ಏನು ಮಾಡುತ್ತೀರಾ?
ಗುಂಡ : ಕೂಡಲೇ.. ಪೇಪರ್ ನಲ್ಲಿ, ಟಿವಿ ನಲ್ಲಿ ಹಾಕಿಸ್ತೀನಿ..
ಗುಂಡಿ : ಏನೂಂತಾ?
ಗುಂಡ : ನೀನು ಎಲ್ಲೇ ಇರು.. ಹೇಗೆ ಇರು.. ಅಲ್ಲೇ ಇರು.. ಅಂತಾ!
***
ತಿಮ್ಮ : ತಗೋಳಪ್ಪಾ. ಸ್ವೀಟ್..
ಗುಂಡ : ಏನ್ ವಿಷಯಪ್ಪಾ?
ತಿಮ್ಮ : ನನಗೂ, ನನ್ನ ಗರ್ಲ್ ಫ್ರೆಂಡ್ ಗೂ ಮದುವೆ ಸೆಟ್ ಆಯ್ತಪ್ಪಾ.
ಗುಂಡ : ಹೌದಾ, ಬಹಳ ಸಂತೋಷ.. ಮದುವೆ ಯಾವತ್ತು?
ತಿಮ್ಮ : ನಂದು ಆಗಸ್ಟ್ 15ಕ್ಕೆ ಅವ್ಳದ್ದು ಸೆಪ್ಟೆಂಬರ್ 10ಕ್ಕೆ.
***
ಗುಂಡ : ನನ್ನ ತಂದೆ ಮಹಾನ್ ಧೈರ್ಯಶಾಲಿ ಕಣೋ.. ಒಂದು ಸಲ ಸಿಂಹದ ಬೋನಿನೊಳಗೆ ಹೋಗಿದ್ರು..
ತಿಮ್ಮ : ಹೌದಾ.. ಅವರು ಹೊರಗೆ ಬರಬೇಕಾದರೆ ಜನ ತುಂಬಾ ಚಪ್ಪಾಳೆ ಹೊಡೆದಿರಬೇಕಲ್ವಾ?
ಗುಂಡ : ಅಲ್ಲೇ ನೀನು ತಪ್ಪು ತಿಳ್ಕೊಂಡಿದ್ದು. ನಾನು ಎಲ್ಲಿ ಹೇಳ್ದೆ ಅವ್ರು ಬೋನಿನಿಂದ ಹೊರಗೆ ಬಂದ್ರೂಂತ!












Click it and Unblock the Notifications