ನನ್ನ ಮೈಯಲ್ಲಿರುವುದು ನಿನ್ನ ರಕ್ತ ತಾನೆ?

ಶೇಕ್ : ನಿನ್ನ ಈ ಸಹಾಯಕ್ಕೆ ನಾನು ಆಭಾರಿಯಾಗಿದ್ದೇನೆ. ನಿನಗೆ ಫೆರಾರಿ ಕಾರ್ ನೀಡುತ್ತಿದ್ದೇನೆ.
ಮಾರ್ವಾಡಿ : ತುಂಬಾ ಸಂತೋಷ.
ಮಾರ್ವಾಡಿ ಮತ್ತೊಮ್ಮೆ ಶೇಕ್ ಗೆ ರಕ್ತದಾನ ಮಾಡುತ್ತಾನೆ. ಆದರೆ ಈ ಬಾರಿ ಕೇವಲ ಒಂದು ರೂಪಾಯಿ ನೀಡುತ್ತಾನೆ.
ಮಾರ್ವಾಡಿ : ಕಳೆದ ಬಾರಿ ಕಾರ್ ನೀಡಿದ್ರಿ.. ಈಗ ಯಾಕೆ ಬರೀ ಒಂದು ರೂಪಾಯಿ ನೀಡುತ್ತಿದ್ದೀರಾ?
ಶೇಕ್ : ಏನ್ಮಾಡ್ಲಪ್ಪಾ.. ಈಗ ನನ್ನ ಮೈಯಲ್ಲಿ ಹರಿಯುತ್ತಿರುವುದು ನಿನ್ನ ರಕ್ತ ತಾನೇ..
***
ಗುಂಡ ಟ್ರೈನ್ ನಲ್ಲಿ ಊರಿಗೆ ಪ್ರಯಾಣಿಸುತ್ತಿದ್ದ. ಪ್ರಯಾಣದ ಮಧ್ಯೆ ಟಿಸಿ ಬಂದು...
ಟಿಸಿ : ರೀ ಟಿಕೆಟ್ ತೋರ್ಸಿ..
ಗುಂಡ : ತಗೋಳಿ.
ಟಿಸಿ : ರೀ.. ಏನ್ ಆಟ ಆಡ್ತಾ ಇದ್ದೀರಾ? ಈ ಟಿಕೆಟ್ ಹಳೆದು.
ಗುಂಡ : ಹೋಗ್ರೀ.. ಏನ್ ಮತ್ತೆ ನಿಮ್ಮ ಟ್ರೈನ್ ಹೊಸದಾ?
ಗುಂಡನ ವಾದಕ್ಕೆ ನಿರುತ್ತರನಾದ ಟಿಸಿ ಮುಂದಿನ ಸ್ಟೇಶನ್ ನಲ್ಲಿ ಗುಂಡನನ್ನು ಕತ್ತು ಹಿಡಿದು ಹೊರಗೆ ದಬ್ಬಿದ.
***
ಗುಂಡ : ನನ್ನ ಹೆಂಡತಿ ಬಿಇ ಪರೀಕ್ಷೆ ಕಟ್ಟುತ್ತಿದ್ದಾಳೆ.
ತಿಮ್ಮ : ಹೌದಾ..
ಗುಂಡ : ನಿನ್ನ ಹೆಂಡತಿ ಏನ್ ಮಾಡಿದಾಳೆ?
ತಿಮ್ಮ : ಅವ್ಳಾ.. ಬಿಇ ಕಷ್ಟಾಂತ 'ಬೀಡಿ' ಕಟ್ಟುತ್ತಿದ್ದಾಳೆ.
***
ಮಗಳು : ಅಪ್ಪಾ.. ಅಪ್ಪಾ. ನನಗೆ ಒಬ್ಬ ಐ ಲವ್ ಯು ಎಂದು ಮೆಸೇಜ್ ಮಾಡ್ತಾ ಇದ್ದಾನಪ್ಪಾ..
ತಂದೆ : ಯಾವನವನು ತಲೆ ಸರಿ ಇಲ್ಲದವನು.. ಅಯೋಗ್ಯ, ಲೋಫರ್... ಅದೇ ಮೆಸೇಜ್ ಅವನಿಗೆ ವಾಪಾಸ್ ಕಳುಹಿಸು ಮಗಳೇ...












Click it and Unblock the Notifications