ಸೂಪರ್ ಮತ್ತು ಆಫರ್ ನಡುವಿನ ವ್ಯತ್ಯಾಸವೇನು?

ಗುಂಡ ಮತ್ತು ತಿಮ್ಮನ ನಡುವೆ ಎಂದಿನಂತೆ ಬೇಕಾಬಿಟ್ಟಿ ಮಾತುಕತೆ ನಡೆಯುತ್ತಿರುತ್ತದೆ..
ತಿಮ್ಮ : ಗುಂಡ.. ಸೂಪರ್ ಮತ್ತು ಆಫರ್ ನಡುವಿನ ವ್ಯತ್ಯಾಸವೇನು?
ಗುಂಡ : ಒಳ್ಳೆ ಮನಸಿರುವ ಹೆಂಡತಿ ಸಿಕ್ಕಿದರೆ ಅದು ಸೂಪರ್.. ಅವಳಿಗೆ ಅಂದವಾದ ತಂಗಿ ಇದ್ದರೆ ಅದು ಆಫರ್.

***
ಟೀಚರ್ : ಮೀನು ಇಲ್ಲದ ಬಲೆ, ಬೆಂಕಿ ಇಲ್ಲದ ಓಲೆ, ಖಾಲಿ ಇರುವ ನಿನ್ನ ತಲೆ, ಇದ್ರೆಷ್ಟು ಬಿಟ್ಟರೆ ಎಷ್ಟು?
ಜ್ಯೂ. ಗುಂಡ : ಸ್ಪರ್ಧೆ ಇಲ್ಲದ ಆಟ, ಹೂವಿಲ್ಲದ ತೋಟ, ಅರ್ಥವಾಗದ ನಿಮ್ಮ ಪಾಠ, ಕೇಳಿದ್ರೆಷ್ಟು ಬಿಟ್ಟರೆಷ್ಟು. ಹೊಗ್ರೀರೀ...

***
ಗುಂಡನ ಮಡದಿ ಆತ್ಮಹತ್ಯೆ ಮಾಡಿಕೊಳ್ಳೋಕೆ ನಿರ್ಧರಿಸುತ್ತಾಳೆ. ಅದಕ್ಕಿಂತ ಮುಂಚೆ ಸರಿಯಾಗಿ ಮೇಕಪ್ ಮಾಡಿಕೊಳ್ಳುತ್ತಾಳೆ..
ಆಕೆಯ ಸ್ನೇಹಿತೆ : ಸಾಯೋ ಸಮಯದಲ್ಲಿ ನಿನಗ್ಯಾಕೆ ಕಣೇ ಈ ಮೇಕಪ್?
ಗುಂಡಿ : ಯಾಕೆಂದ್ರೆ, ಸತ್ತ ಮೇಲೆ ಟಿವಿ9 ನವರು ಬರ್ತಾರಲ್ಲಾ. ನನ್ನ ಮುಖ ಚೆನ್ನಾಗಿ ಕಾಣಿಸಬೇಕಲ್ವಾ?

***
ಅಜ್ಜ ಅಜ್ಜಿ ಬಹಳ ಸಮಯದ ನಂತರ ಊಟ ಮಾಡಲು ರೆಸ್ಟೋರೆಂಟ್ ಗೆ ಹೋಗುತ್ತಾರೆ. ಇವರು ಆರ್ಡರ್ ಮಾಡಿದ ತಿಂಡಿಯನ್ನು ಮಾಣಿ ತಂದಿಡುತ್ತಾನೆ.
ಮಾಣಿ : ಅಜ್ಜಿ , ತಿಂಡಿ ತೆಗೆದುಕೊಂಡು ಬಂದಿದ್ದೀನಿ, ತಿನ್ನಿ..
ಅಜ್ಜಿ : ಇರಪ್ಪಾ.. ಅವ್ರು ಮೊದ್ಲು ತಿನ್ಲಿ..
ವೈಟರ್ : ಆಹಾ.. ಗಂಡ ಅಂದ್ರೆ ಎಷ್ಟು ಪ್ರೀತಿ ನಿನಗೆ..
ಅಜ್ಜಿ : ಹೋಗಯ್ಯಾ.. ಪ್ರೀತಿನು ಇಲ್ಲಾ.. ಕರ್ಮಾನು ಇಲ್ಲಾ. ನಮ್ಮಿಬ್ಬರ ಬಳಿ ಇರೋದು ಒಂದೇ ಹಲ್ಲಿನ ಸೆಟ್!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+