ಕಮಲ ಪಕ್ಷದ ಗುಂಡನಿಗೆ ಬಿತ್ತು ಕಪಾಳಮೋಕ್ಷ!
ಸರಕಾರದಲ್ಲಿ ಏನೇನೋ ಗಲಾಟೆಗಳಾಗಿ ಮುಖ್ಯಮಂತ್ರಿ ವಿಧಾನಸಭೆಯನ್ನೇ ವಿಸರ್ಜನೆ ಮಾಡಿದ್ದರಿಂದ ಮಧ್ಯಂತರ ಚುನಾವಣೆ ಘೋಷಣೆಯಾಯಿತು. ಚುನಾವಣಾ ದಿನ ಹತ್ತಿರವಾಯಿತು. ರಾಜಕೀಯ ಪಕ್ಷಗಳು ಪ್ರಚಾರ ಭರಾಟೆಯಲ್ಲಿ ತೊಡಗಿದ್ದವು.
ಗುಂಡ ಕೂಡಾ ಇದರಲ್ಲಿ ಬಹಳ ಬ್ಯೂಸಿಯಾಗಿದ್ದ. ಗುಂಡ ಚುನಾವಣಾ ಪ್ರಚಾರದ ಸಮಯದಲ್ಲಿ ಒಂದು ಹುಡುಗಿಗೆ ಕಮಲದ ಹೂ ಕೊಟ್ಟ. ಹುಡುಗಿ ಗುಂಡನ ಕೆನ್ನೆಗೆ ಫಟಾರ್ ಎಂದು ಹೊಡೆದಳು.
ಗುಂಡ : ಯಾಕ್ರೀ.. ಹೊಡಿತೀರಾ? ನಾನು ಕಮಲದ ಪಕ್ಷದ ಪರವಾಗಿ ಪ್ರಚಾರ ನಡೆಸುತ್ತಿದ್ದೇನೆ.
ಹುಡುಗಿ : ಹೌದಾ.. ನಾನು ಕೈ ಪಕ್ಷದ ಪರವಾಗಿ ಪ್ರಚಾರ ಮಾಡುತ್ತಿದ್ದೇನೆ.
***
ಗುಂಡ : ನಾನೇನಾದ್ರೂ ಈ ಜೋಕ್ ನಿನಗೆ ಹೇಳಿದ್ರೆ ನೀನು ನಕ್ಕು ನಕ್ಕು ಸಾಯ್ತಿಯಾ..
ತಿಮ್ಮ : ಏನೋ ಅದು? ಹೇಳೋ
ಗುಂಡ : ನಾನು ಹೇಳಲ್ಲಪ್ಪಾ
ತಿಮ್ಮ : ಯಾಕೋ?
ಗುಂಡ : ಯಾಕಂದ್ರೆ ಜೋಕ್ ಗಿಂತ ನನಗೆ ನಿನ್ನ ಪ್ರಾಣ ಮುಖ್ಯ ಕಣೋ!
***
ಗುಂಡನಿಗೆ ಸಮಾಜಸೇವೆಯಲ್ಲಿ ತನ್ನನ್ನು ತೊಡಗಿಸಿಕೊಳ್ಳಬೇಕೆನಿಸಿತು.. ಅದಕ್ಕೆ ತಿಮ್ಮನ ಸಹಾಯ ಪಡೆದ...
ಒಂದು ದಿನ.. ತಿಮ್ಮ ಗುಂಡನಿಗೆ ಒಂದೇ ಸಮನೆ ಹೊಡೆಯಲಾರಂಭಿಸಿದ.
ಏನಕ್ಕಂದರೆ .. ಗುಂಡ ಸ್ಮಶಾನದಲ್ಲಿ.. "ನಿಮಗೆ ಆತ್ಮೀಯವಾದ ಸ್ವಾಗತ" ಎಂದು ಬೋರ್ಡ್ ಹಾಕುತ್ತಿದ್ದ..
***
ಗುಂಡ ತನಗೆ ತೊಂದರೆ ಬಂದಾಗಲೆಲ್ಲಾ ಪರ್ಸ್ ನಲ್ಲಿರುವ ತನ್ನ ಹೆಂಡತಿ ಫೋಟೋ ನೋಡುತ್ತಿದ್ದ. ತಿಮ್ಮನಿಗೆ ಆಶ್ಚರ್ಯ..
ತಿಮ್ಮ : ಯಾಕೋ, ಸಂಕಟ ಬಂದಾಗಲೆಲ್ಲಾ ವೆಂಕಟರಮಣ ಅಂದಹಾಗೆ ಹೆಂಡತಿ ಫೋಟೋ ತೆಗೆದು ನೋಡುತ್ತೀಯಾ?
ಗುಂಡ : ಈ ತೊಂದರೆಯನ್ನೇ (ಹೆಂಡತಿ)ಎದುರಿಸುತ್ತಿರಬೇಕಾದರೆ ಮುಂದೆ ಯಾವ ತೊಂದರೆ ಬಂದರೂ ಎದುರಿಸಬಹುದು ಬಿಡು..











Click it and Unblock the Notifications