ಜೋಕ್ಸ್ : ಗುಂಡಾ ಗುಂಡಿಯರ ಗಂಡಾಗುಂಡಿ!

ಗುಂಡನ ಪತ್ನಿ ಗುಂಡಿ : ಈ ವಾರ ಫುಲ್ ಸಿನಿಮಾಗೆ ಹೋಗೋಣಾ.. ಬರುವ ವಾರ ಫುಲ್ ಶಾಪಿಂಗ್ ಮಾಡೋಣ..
ಗುಂಡ : ಅದರ ಮುಂದಿನ ವಾರ ಫುಲ್ ದೇವಸ್ಥಾನಕ್ಕೆ ಹೋಗೋಣಾ.
ಗುಂಡಿ : ಯಾಕೆ?
ಗುಂಡ : ಭಿಕ್ಷೆ ಬೇಡೋಕೆ!

***
ಗುಂಡ ಫೋಟೋ ತೆಗ್ಸೋಕೆ ಸ್ಟುಡಿಯೋಗೆ ಹೋದ..
ಗುಂಡ : ಸರ್ ನಿಮ್ಮಲ್ಲಿ.. ಪಾಸ್ಪೋರ್ಟ್ ಸೈಜ್ ಫೋಟೋ ನಲ್ಲಿ ಚಪ್ಪಲಿ ತನಕ ಫೋಟೋ ತೆಗೆಯೋಕಾಗುತ್ತಾ?
ಅಂಗಡಿ ಮಾಲಿಕ : ಬರುತ್ತೆ, ಆದ್ರೆ ನೀವು ಚಪ್ಪಲಿ ತಲೆಮೇಲೆ ಇಟ್ಕೊಂಡ್ರೆ ಮಾತ್ರಾ!

***
ಗುಂಡ : ನೋಡೋ ತಿಮ್ಮ, ಆ ಶಿವಣ್ಣನಿಗೆ ಎಷ್ಟು ಹೇಳಿದ್ರೂ ಇಲ್ಲ, ನಮ್ಮ ದೇಶ ಹಿಂದೂಸ್ಥಾನ್ ಬಿಟ್ಟು ಅಮೇರಿಕಾದಲ್ಲಿ ಸೆಟ್ಲ್ ಆಗುತ್ತಾನಂತೆ ಕಣೋ...
ತಿಮ್ಮ : ಹೌದಾ, ಅವನಿಗೆ ಹೋಗೋ ಮುಂಚೆ ಸರಿಯಾದ ಅಡ್ಡ ಹೆಸ್ರು ಇಟ್ಟು ಕಳುಹಿಸಬೇಕು. ಏನೂಂತಾ ಇಡೋಣ ಹೇಳು?
ಗುಂಡ : 'ಹಿಂದೂಸ್ಥಾನ್ ಲೀವರ್' ಅಂತ ಇಟ್ಟರೆ?

***
ಗುಂಡ : ಒಂದು ತಿಂಗಳ ನಂತರ ನಾನು ವರದಕ್ಷಿಣೆ ವಿರುದ್ದ ಬೀದಿಗಿಳಿದು ಉಗ್ರ ಹೋರಾಟ ನಡೆಸುತ್ತೇನೆ.
ತಿಮ್ಮ : ಒಂದು ತಿಂಗಳು ಬಿಟ್ಟು ಯಾಕೆ? ಇಂದಿನಿಂದಲೇ ಶುರು ಮಾಡು.
ಗುಂಡ : ಯಾಕೆಂದರೆ, ಈ ತಿಂಗಳು ನನ್ನ ಮತ್ತು ಅದಾದ ಹತ್ತು ದಿನದಲ್ಲಿ ನನ್ನ ಸಹೋದರನ ಮದುವೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+