ಆಹಾ, ಏನ್ ತಲೇಲೆ ಕುಲಪುತ್ರ ನಿಂದು!

ಗುಂಡ : ಹೌದು ಕಣೋ, ಅದು ಹೇಗೆ ಆಗುತ್ತೆ?
ಜ್ಯೂ ಗುಂಡ : ಹಾಗಾದ್ರೆ.. ಒಬ್ಬ ಸ್ಟುಡೆಂಟ್ ಎಲ್ಲಾ ಸಬ್ಜೆಕ್ಟ್ ಹೇಗಪ್ಪಾ ಓದೋಕ್ಕೆ ಆಗುತ್ತೆ?
ಗುಂಡ : ಆಹಾ, ಏನ್ ತಲೇಲೆ ಕುಲಪುತ್ರ ನಿಂದು. ಹಾಗಾದ್ರೆ ವರ್ಷಕ್ಕೊಂದೊಂದೇ ಸಬ್ಜೆಕ್ಟ್ ಪಾಸ್ ಮಾಡಿ ಮದುವೆ ವಯಸ್ಸಿಗೆ ಬರುವಷ್ಟರಲ್ಲಿ ಏಳನೇ ಕ್ಲಾಸ್ ಆದ್ರೂ ಮುಗ್ಸು...
***
ಗುಂಡನ ಪ್ರಕಾರ ಎಸ್ಎಂಎಸ್ ಎಂದರೆ ಹೀಗೆ:
ಎಸ್ : ಸಿಂಹ ಕಳುಹಿಸಿದಾಗ
ಎಮ್ : ಮಂಗ ಓದುವ
ಎಸ್ : ಸಂದೇಶ!
***
ಗುಂಡ ತನ್ನ ಆಪ್ತಮಿತ್ರ ತಿಮ್ಮನಿಗೆ ಕಳುಹಿಸಿದ ಮೆಸೇಜ್...
ಲವ್ ಮಾಡೋರೆಲ್ಲಾ ಲೈಲಾ ಮಜ್ನು ಆಗೋಲ್ಲ. ಕಟ್ಟೋ ಬಿಲ್ಡಿಂಗ್ ಎಲ್ಲಾ ತಾಜ್ ಮಹಲ್ ಆಗೋಲ್ಲ...
ಬೀಳೋ ಮಳೆಯೆಲ್ಲಾ ಮುಂಗಾರು ಮಳೆಯಾಗಲ್ಲ. ಸಿಗೋ ಸ್ನೇಹಿತರೆಲ್ಲಾ ಈ ಗುಂಡನ ತರ ಇರೋಲ್ಲಾ.. ತಿಳಿತಾ ಬಡ್ಡೆದೇ..
***
ಗುಂಡ : ನಮ್ ಕಾಲದಲ್ಲಿ ಹತ್ತು ರೂಪಾಯಿ ತಗೊಂಡು ಹೋದ್ರೆ ದಿನಸಿ, ಹಾಲು, ಮೊಸರು ಎಲ್ಲಾ ತರ್ತಾ ಇದ್ವಿ.
ಜ್ಯೂ. ಗುಂಡ : ಈಗ ಅದೆಲ್ಲಾ ಆಗಲ್ಲ ಅಪ್ಪ.. ಎಲ್ಲಾ ಅಂಗಡಿಯಲ್ಲೂ ಸಿಸಿಟಿವಿ ಕ್ಯಾಮೆರಾ ಹಾಕಿರ್ತಾರೆ.. [ನಿಮ್ಮ ಬಳಿಯೂ ಉತ್ತಮ ಜೋಕ್ಸ್ ಗಳಿದ್ದರೆ ಈ ವಿಳಾಸಕ್ಕೆ ಕಳಿಸಿ.]












Click it and Unblock the Notifications