ಜೋಕ್ಸ್ : ಡಾ. ಬೇವರ್ಸಿ, ಸೈಕೋ ದಿ ರೇಪಿಸ್ಟ್!
ಉತ್ತರ ಭಾರತದ ವೈದ್ಯರೊಬ್ಬರು ನಗರದಲ್ಲಿ ಕ್ಲಿನಿಕ್ ಸ್ಟಾರ್ಟ್ ಮಾಡುತ್ತಾರೆ. ಕ್ಲಿನಿಕ್ ಹೆಸರು ಬರೆಯಲು ಪೈಂಟರ್ ನನ್ನು ಕರೆದು ಈ ರೀತಿ ಬರೆಯಲು ಹೇಳುತ್ತಾರೆ. "Dr. B E Warsi, Psycotherapist". ಆದರೆ ಇಂಗ್ಲಿಷ್ ನಲ್ಲಿ ತಾನು ಏನು ಬರೆಯುತ್ತಿದ್ದೇನೆಂದು ತಿಳಿಯದ ಪೈಂಟರ್ ಎಲ್ಲಿ ಜಾಗ ಬಿಡಬೇಕೋ ಅಲ್ಲಿ ಬಿಡದೆ, ಎಲ್ಲಿ ಬಿಡಬಾರದೋ ಅಲ್ಲಿ ಬಿಟ್ಟು ಹೀಗೆ ಬರೆಯುತ್ತಾನೆ "Dr. Bewarsi, Psyco The Rapist"!
***
ತಿಮ್ಮ : ಏ.. ಗುಂಡಾ ಬಾರೋ, ಚೆಸ್ ಆಡೋಣ.
ಗುಂಡ : ಸಾರಿ.. ನಾನು ಬರೋಲ್ಲಾ ಕಣೋ..
ತಿಮ್ಮ : ಯಾಕೆ? ಚೆಸ್ ಆಡೋಕೆ ಬರೋಲ್ವಾ? ನಾನು ಹೇಳಿ ಕೊಡ್ತೀನಿ.
ಗುಂಡ : ಆಡೋಕೆ ಗೊತ್ತು, ಆದರೆ ನನ್ನಲ್ಲಿ ಸ್ಪೋರ್ಟ್ಸ್ ಶೂ ಇಲ್ಲ!
***
ಗುಂಡ ಅಪಘಾತಕ್ಕೆ ಈಡಾಗುತ್ತಾನೆ. ಆಸ್ಪತ್ರೆಗೆ ಹೋಗಿ, ಡಾಕ್ಟರ್ ಗೆ ತೋರಿಸುತ್ತಾನೆ.
ಡಾಕ್ಟರ್ : ಗುಂಡ ಅವರೇ ಈಗ ಆಗಿರುವ ಗಾಯಕ್ಕೆ ಸ್ಟಿಚ್ ಹಾಕಬೇಕು.
ಗುಂಡ : ಹೌದಾ.. ಎಷ್ಟು ಖರ್ಚಾಗುತ್ತೆ?
ಡಾಕ್ಟರ್ : ನಾಲ್ಕೂವರೆ ಸಾವಿರ ರೂಪಾಯಿ.
ಗುಂಡ : ರೀ ಡಾಕ್ಟ್ರೆ.. ನಾನು ಹೇಳಿದ್ದು ಸ್ಟಿಚ್ ಹಾಕೋಕೆ, ಎಂಬ್ರಾಯಿಡರಿ ವರ್ಕ್ ಗೆ ಅಲ್ಲ!
***
ಗುಂಡ : ರಾತ್ರಿ ಇಡೀ ಟ್ರೈನ್ ನಲ್ಲಿ ನಿದ್ದೇನೆ ಬಂದಿಲ್ಲ ಗುರು..
ತಿಮ್ಮ : ಯಾಕಪ್ಪಾ..?
ಗುಂಡ : ಟ್ರೈನ್ ನಲ್ಲಿ ನಂದು ಅಪ್ಪರ್ ಬರ್ತ್
ತಿಮ್ಮ : ನಿದ್ದೆ ಬಂದಿಲ್ಲಾಂದರೆ ಸೀಟ್ ಚೇಂಜ್ ಮಾಡಬೇಕಿತ್ತು.
ಗುಂಡ : ಚೇಂಜ್ ಮಾಡೋಕೆ ಲೋಯರ್ ಬರ್ತ್ ನಲ್ಲಿ ಯಾರೂ ಇದ್ದಿದ್ದಿಲ್ಲ.












Click it and Unblock the Notifications