ಜಾಣ ಗುಂಡ ಸಂದರ್ಶನದಲ್ಲಿ ಏನು ಹೇಳಿದ?

ಸಂದರ್ಶಕ : ಮಹಾತ್ಮಾ ಗಾಂಧಿಯವರನ್ನು ಕೊಂದವರಾರು?
ಗುಂಡ : ಒಹ್ ಕೆಲಸ ಕೊಟ್ಟಿದ್ದಕ್ಕೆ ತುಂಬಾ ಥ್ಯಾಂಕ್ಸ್. ಗಾಂಧೀ ಅವರನ್ನು ಕೊಂದ ಪಾಪಿ ಯಾರೆಂದು ಸದ್ಯದಲ್ಲೇ ಪತ್ತೆ ಹಚ್ಚುತ್ತೇನೆ.
ಸಂದರ್ಶಕ : ಪ್ಲೀಸ್.. ಗೆಟ್ ಔಟ್
***
ಗುಂಡ ತನ್ನ ಮಗನ ಸ್ಕೂಲಿನ ಪೇರೆಂಟ್ಸ್ ಮೀಟಿಂಗ್ ಹೋಗಿದ್ದ.
ಪ್ರಿನ್ಸಿಪಾಲ್ : ಡಿಯರ್ ಪೇರೆಂಟ್ಸ್, ನೋಡಿ.. ಈ ಶೈಕ್ಷಣಿಕ ವರ್ಷದಿಂದ ನಮ್ಮ ಸ್ಕೂಲಿನಲ್ಲಿ ಉಚಿತ ಊಟ ಕೊಡ್ತೀವಿ, ಬ್ಯಾಗ್, ಬುಕ್, ಸ್ಕಾಲರ್ಷಿಪ್ ಕೊಡ್ತೀವಿ.. ಅಲ್ಲದೆ ಫ್ರೀಯಾಗಿ ಟೂರ್ ಕರ್ಕೊಂಡು ಹೋಗ್ತೀವಿ, ಸ್ಪೋರ್ಟ್ಸ್ ನಡೆಸ್ತೀವಿ, ಸ್ಕೂಲ್ ಡೇ ಮಾಡ್ತೀವಿ..
ಗುಂಡ : ಅದೆಲ್ಲಾ ಓಕೆ, ಪಾಠ ಯಾವಾಗ ಮಾಡ್ತೀರಾ?
***
ಗುಂಡ : ಆ ನಮ್ಮ ದೇವಾಸ್ಥಾನದ ಆನೆ ಸತ್ತು ಹೋಗಿತ್ತು ಕಣೋ. ಎಲ್ರೂ ಆನೇನಾ ಮುಟ್ಟಿ ಮುಟ್ಟಿ ಅಳುತ್ತಿದ್ದರು.
ತಿಮ್ಮ : ಆನೇನಾ ಮುಟ್ಟಿ ಮುಟ್ಟಿ ಯಾಕೆ ಎಲ್ರೂ ಅಳುತ್ತಿದ್ದರು?
ಗುಂಡ : ದಡ್ಡಾ.. ಅಷ್ಟೂ ಗೊತ್ತಾಗಲ್ವಾ? ತಬ್ಕೊಂಡು ಅಳೋಕೆ ಆಗೋದಿಲ್ವಲ್ಲಾ ಅದಕ್ಕೆ..
***
ಗುಂಡನ ಹೆಂಡತಿ ತವರು ಮನೆಗೆ ಹೊರಟಳು. ಅಡುಗೆ ಮಾಡುವ ವಿಧಾನವನ್ನು ಗುಂಡನಿಗೆ ವಿವರಿಸಿದಳು..
ಗುಂಡ ಹೆಂಡತಿ ಹೇಳಿದ ಪ್ರಕಾರ ಅಡುಗೆ ತಯಾರು ಮಾಡಿದ. ಒಂದು ಡೌಟ್ ಬಂತು.. ಹೆಂಡತಿಗೆ ಫೋನ್ ಮಾಡಿದ "ಅದು ಸರಿ ತಲೆ ಕೂದಲು ಹಾಕೋದು ಯಾವಾಗ?"












Click it and Unblock the Notifications