ಹಗುರ ವದಿವಾ 'ತಂಗಿ', ಬಾಗಲಕೋಟಿದಾಗ ಕೆಲಸ ಐತಿ!

ಹುಡುಗಿ : ಜಾಡಿಸಿ ಒದ್ಯಾ ಅಂದ್ರ ಬಿಜಾಪುರ ಒಳಗ ಹೋಗಿ ಬಿದ್ರಿರ್ತಿ ಮಗನಾ.
ಹುಡುಗ : ಸ್ವಲ್ಪ ಹಗುರ ಒದಿವಾ 'ತಂಗಿ', ನನಗ ಬಾಗಲಕೋಟಿದಾಗ ಸ್ವಲ್ಪ ಕೆಲಸಾ ಐತಿ!
***
ಗುಂಡ ಓದುತ್ತಿರುವ ಕ್ಲಾಸ್ ನಲ್ಲಿ ಟೀಚರ್ ವಿದ್ಯಾರ್ಥಿಗಳಿಗೆ ಕ್ರಿಕೆಟ್ ಬಗ್ಗೆ ಒಂದು ಲೇಖನ ಬರೆಯಲು ಹೇಳುತ್ತಾರೆ. ಎಲ್ಲಾ ಮಕ್ಕಳು ತದೇಕಚಿತ್ತದಿಂದ ಬರೆಯುತ್ತಿರಬೇಕಾದರೆ ಗುಂಡ ಒಂದೇ ವಾಕ್ಯ ಬರೆದು ಸುಮ್ಮನೆ ಕೂತಿರುತ್ತಾನೆ. ಟೀಚರ್ ಗುಂಡ ಏನು ಬರೆದಿದ್ದಾನೆಂದು ನೋಡಿದರೆ "ಮಳೆಯಿಂದಾಗಿ ಪಂದ್ಯವನ್ನು ರದ್ದುಗೊಳಿಸಲಾಗಿದೆ " ಎಂದು ಒಂದೇ ವಾಕ್ಯದಲ್ಲಿ ಬರೆದು ಮುಗಿಸಿದ್ದ.
***
ಗುಂಡನಿಗೆ ಚಿಕನ್ ತಿನ್ನಲು ಮನಸಾಗಿ ಚಿಕನ್ ಸ್ಟಾಲ್ ಗೆ ಹೋಗುತ್ತಾನೆ.
ಗುಂಡ: ಅಲ್ಲಿರುವ ಕೋಳೀನ ಪ್ಯಾಕ್ ಮಾಡಿ.
ಅಂಗಡಿಯವ: ಅದು ಕೊಡೋಕೆ ಆಗಲ್ಲಾ ಸ್ವಾಮಿ.
ಗುಂಡ: ಯಾಕೆ?
ಅಂಗಡಿಯವ: ಆ ಕೋಳಿಗೆ ಏಡ್ಸ್ ಇತ್ತು ಮಾರಾಯ್ರೇ.
ಗುಂಡ: ಕೊಡ್ರೀ.. ನನಗೆ ಸಾಂಬಾರ್ ಮಾಡೋಕೆ, ಆ ಕೋಳೀನ ಏನು ಮದುವೆ ಮಾಡ್ಕೋತೀನ?
***
ಗುಂಡ: ತಿಮ್ಮ.. ಮುಂದಿನ ಜನ್ಮಾಂತ ಒಂದು ಇದ್ದರೆ.. ನೀನು ಏನಾಗಕ್ಕೆ ಬಯಸುತ್ತೀಯಾ?
ತಿಮ್ಮ: ಜಿರಳೆ
ಗುಂಡ: ಯಾಕೆ?
ತಿಮ್ಮ; ನನ್ನ ಹೆಂಡತಿಗೆ ಜಿರಳೆ ಅಂದ್ರೇ ಮಾತ್ರ ಭಯ ಕಣೋ.
***
ಗುಂಡ 100 ರುಪಾಯಿ ಕೊಟ್ಟು ಬೇರೆ ಬೇರೆ ಸಂಸ್ಥೆಯ 20 ಲಾಟರಿ ಟಿಕೆಟ್ ತೆಗೆದುಕೊಂಡ. ಅದೃಷ್ಟವೋ ಅದೃಷ್ಟ.. ಎಲ್ಲಾ ಟಿಕೆಟ್ ನಲ್ಲೂ ಬಂಪರ್ ಬಹುಮಾನ. 20 ಕೋಟಿ ರು.. ಲಾಟರಿ ಏಜೆಂಟ್ ಟಿಡಿಎಸ್ (ತೆರಿಗೆ) ಕಟ್ ಮಾಡಿ 11.50 ಕೋಟಿ ರು.ಗುಂಡನಿಗೆ ಕೊಟ್ಟ. ಗುಂಡನಿಗೆ ಸಿಟ್ಟು ನೆತ್ತಿಗೇರಿ ಕೊಡುವುದಾದರೆ 20 ಕೋಟಿ ಕೊಡು.. ಇಲ್ಲಾಂದರೆ ನನ್ನ 20 ರುಪಾಯಿ ವಾಪಾಸ್ ಕೊಡು!











Click it and Unblock the Notifications