ಗುಂಡ ಬರೆಯುವ ಉತ್ತರಗಳು 'ಹೀಗೂ ಉಂಟೆ'!

***
ಶಾಂಪೂ ಜಾಹೀರಾತು ನಿರ್ವಹಣೆ ಜವಾಬ್ದಾರಿ ವಹಿಸಿಕೊಂಡಿದ್ದ ಗುಂಡ, ಈ ಬಾರಿ ಜಾಹೀರಾತಿಗೆ ಕ್ರಿಕೆಟ್ ಅಥವಾ ಸಿನಿಮಾ ತಾರೆಯರನ್ನು ಕರೆಸುವ ಬದಲು ರಾಜಕಾರಿಣಿಯೊಬ್ಬರನ್ನು ಬಳಸಿಕೊಳ್ಳಲು ನಿರ್ಧರಿಸಿದ. ಕೊನೆಗೆ ನಮ್ಮ ದೇವೇಗೌಡರನ್ನು ಇದಕ್ಕಾಗಿ ಒಪ್ಪಿಸಿದ. ಗುಂಡ ಕೊಟ್ಟ ಡೈಲಾಗ್ ಅನ್ನು ಗೌಡ್ರು ತಮ್ಮ ಎಂದಿನ ನೈಜ ಅಭಿನಯದ ಮೂಲಕ ಪ್ರಸ್ತುತ ಪಡಿಸಿದರು. "ಕ್ಲಿನಿಕ್ ಪ್ಲಸ್ ಶಾಂಪೂ ಮತ್ತು ವಾಟಿಕಾ ಹೈರ್ ಆಯಿಲ್ ಬಳಸಿದ ಮೇಲೆ ನನ್ನ ತಲೆ ಕೂದಲು ಉದುರುವುದು ಸಂಪೂರ್ಣವಾಗಿ ನಿಂತು ಹೋಯಿತು. ನೀವು ಇದನ್ನೇ ಬಳಸಿ ತಲೆಗೂದಲು ಉದುರುವುದರಿಂದ ಬಚಾವ್ ಆಗಿ".
***
ಗುಂಡನನ್ನು ಖೋಟ ನೋಟು ಜಾಲದಲ್ಲಿ ಪೊಲೀಸರು ಬಂದಿಸುತ್ತಾರೆ. ಸೆಲ್ ನಲ್ಲಿ ತಿಮ್ಮ ಅವನನ್ನು ಭೇಟಿ ಮಾಡಿ..
ತಿಮ್ಮ: ಖೋಟಾ ನೋಟು ತಯಾರು ಮಾಡುವುದರಲ್ಲಿ ನೀನು ಪಂಟರ್, ಹೇಗೋ ಸಿಕ್ಕಿಬಿದ್ದೆ?
ಗುಂಡ: ಎಲ್ಲಾ ಸರಿಯಾಗಿ ಮಾಡ್ದೆ ಕಣೋ..
ತಿಮ್ಮ: ಮತ್ತೆ ಇನ್ನೇನಾಯಿತೋ?
ಗುಂಡ: ಕೊನೆಗೆ ಗಾಂಧೀ ಫೋಟೋ ಹಾಕೋ ಬದ್ಲು, ನಮ್ಮಪ್ಪನ ಫೋಟೋ ಹಾಕ್ದೆ ಕಣೋ..
***
ಗುಂಡನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ವೈದ್ಯರು ಗುಂಡನನ್ನು ಕೇಳಿದರು..
ವೈದ್ಯ: ಗುಂಡ ಅವರೇ, ಆಸ್ಪತ್ರೆಗೆ ನೀವು ದಾಖಲಾಗಿ ಇಂದಿಗೆ ಮೂರು ದಿನವಾಯಿತು. ಹೇಗಿದೆ ನಿಮ್ಮ ಆರೋಗ್ಯ, ಏನನಿಸುತಿದೆ?
ಗುಂಡ: ಪರವಾಗಿಲ್ಲ ಡಾಕ್ಟರ್, ಆದರೆ ಒಂದು ವಿಶ್ಯಕ್ಕಂತೂ ತುಂಬಾ ಕಷ್ಟವಾಗುತ್ತಿದೆ.
ವೈದ್ಯ: ಏನು ಕಷ್ಟ?
ಗುಂಡ: ಅದೇ ಡಾಕ್ಟರ್, ಈ ಸುಂದರವಾದ ನರ್ಸ್ ಗಳನ್ನೂ ಸಿಸ್ಟರ್ ಎಂದು ಕರೀಬೇಕಲ್ಲಾ..












Click it and Unblock the Notifications