ಥೂ, ಹೋಗೀಪಾ... ಸುಮ್ನೆ ಆಸೆ ಹುಟ್ಸಬೇಡಿ!
ಗುಂಡ : ನಾನು ಸತ್ತರೆ ನೀನು ಬೇರೆ ಮದುವೆ ಆಗ್ತೀಯಾ?
ಗುಂಡನ ಹೆಂಡತಿ : ಥೂ, ಹೋಗೀಪಾ. ಸುಮ್ನೆ ಆಸೆ ಹುಟ್ಸಬೇಡಿ. ನಂಗೆ ನಾಚಿಕೆ ಆಗುತ್ತೆ!
***
ರಸ್ತೆಯಲ್ಲೊಂದು ಭೀಕರ ಅಪಘಾತವಾಗಿತ್ತು. ಅದನ್ನು ನೋಡಲು ಜನಜಂಗುಳಿಯೇ ಸೇರಿತ್ತು. ಅಲ್ಲಿಗೆ ಬಂದ ಗುಂಡನಿಗೆ ಅಲ್ಲಿ ಏನು ನಡೆಯಿತು ಎಂದು ನೋಡುವ ಕುತೂಹಲ. ಆದರೆ ಗುಂಡನಿಗೆ ನೋಡೋಕೆ ಆಗುತ್ತಿರಲಿಲ್ಲ. ಕೂಡಲೇ ಬುದ್ದಿವಂತ ಗುಂಡ ಜೋರಾಗಿ ಕೂಗಿದ "ಅಲ್ಲಿ ಸತ್ತವನ ಅಪ್ಪ ನಾನು, ದಾರಿ ಬಿಡಿ" ಎಂದ. ಜನ ದಾರಿ ಬಿಟ್ಟು ಗುಂಡ ಮುಂದೆ ಬಂದು ನೋಡಿದಾಗ, ಅಲ್ಲಿ ಸತ್ತು ಬಿದ್ದಿದ್ದು ನಾಯಿ!
***
ಬಾಸ್ : ಗುಂಡ ಐ ಯಾಮ್ ಸಾರಿ.. ನಿನಗೆ ಈ ಆಫೀಸ್ ನಲ್ಲಿ ಕೊಡಲು ಯಾವ ಕೆಲಸನೂ ಇಲ್ಲ. ನೀನು ಬೇರೆ ಕಡೆ ಕೆಲಸ ಹುಡ್ಕೋ.
ಗುಂಡ : ಸಾರ್ ದಯವಿಟ್ಟು ನನ್ನನ್ನು ಕೆಲಸಕ್ಕೆ ಸೇರಿಸಿಕೊಳ್ಳಿ. ಆಮೇಲೆ ಈ ಆಫೀಸ್ ನಲ್ಲಿ ಕೆಲಸ ಕೊಡೀಂತ ಯಾವತ್ತೂ ನಿಮ್ಮನ್ನು ಕೇಳೊಲ್ಲಾ!
***
ಗುಂಡ : ಲೇ ತಿಮ್ಮ.. ಜೀವನದ ಕಲ್ಲು ಮುಳ್ಳಿನ ಹಾದಿಯಲ್ಲಿ ಯಾರು ನಮ್ಮ ಜೊತೆ ಇರ್ತಾರೆ?
ತಿಮ್ಮ : ಅಪ್ಪ.. ಅಮ್ಮ
ಗುಂಡ : ಅಲ್ಲ
ತಿಮ್ಮ : ಅಣ್ಣ ತಂಗಿ, ಸ್ನೇಹಿತರು
ಗುಂಡ : ಅಲ್ಲ
ತಿಮ್ಮ : ಮತ್ತೆ ಯಾರೋ?
ಗುಂಡ : ಅಯ್ಯೋ ಮಂಕೇ.. ನೀನು ಹಾಕ್ಕೊಂಡಿರೊ ಚಪ್ಪಲಿ ಕಣೋ.











Click it and Unblock the Notifications