ಮಗನೆ ನಿನ್ನ ಗರ್ಲ್ ಫ್ರೆಂಡ್ ನೋಡೋಕೆ ಹ್ಯಾಗಿದ್ದಾಳೆ?

Naughty Kannada jokes
ಮಗ : ಅಪ್ಪಾ.. ನಾಳೆ ನನ್ನ ಗರ್ಲ್ ಫ್ರೆಂಡ್ ಬರ್ತಡೇ. ಏನು ಗಿಫ್ಟ್ ಕೊಡ್ಲಪ್ಪಾ?
ತಂದೆ : ನೋಡೋಕೆ ಹೇಗಿದಾಳೆ?
ಮಗ : ಸಖತ್ತಾಗಿದ್ದಾಳೆ.
ತಂದೆ : ಹಾಗಾದರೆ ನನ್ನ ಮೊಬೈಲ್ ನಂಬರ್ ಕೊಡು!

***
ಒಂದು ಹುಡುಗಿ ತನ್ನ ತೂಕ ಚೆಕ್ ಮಾಡ್ತಿದ್ಳು - 58 ಕೆಜಿ
ಚಪ್ಪಲಿ ತೆಗೆದು ಚೆಕ್ ಮಾಡಿದಾಗ - 56 ಕೆಜಿ
ಜರ್ಕಿನ್ ತೆಗೆದು ಚೆಕ್ ಮಾಡಿದಾಗ - 53 ಕೆಜಿ
ದುಪಟ್ಟಾ ತೆಗೆದು ಚೆಕ್ ಮಾಡಿದಾಗ - 52 ಕೆಜಿ
ಅಷ್ಟರಲ್ಲಿ ಅವಳ ಒಂದು ರುಪಾಯಿ ನಾಣ್ಯಗಳು ಖಾಲಿ ಆಯಿತು..
ಹಿಂದೆ ವೈಟ್ ಚೆಕ್ ಮಾಡೋಕೆ ನಿಂತಿದ್ದ ತರ್ಲೆ ಹುಡುಗನೊಬ್ಬ ''ನೀನು ಮುಂದುವರಿಸು ನನ್ನ ಬಳಿ ಬೇಕಾದಷ್ಟು ಕಾಯಿನ್ ಗಳಿವೆ!"

***
ಟೀಚರ್ : ಮಕ್ಕಳೇ ಪರೀಕ್ಷೆ ಹತ್ತಿರ ಬರುತ್ತಿದೆ. ನಿಮಗೆ ಏನಾದರೂ ಡೌಟ್ ಇದ್ದಾರೆ ಕೇಳಿ..
ಗುಂಡ : ಮಿಸ್.. ಎಕ್ಸಾಮ್ ಪೇಪರ್ ಎಲ್ಲಿ ಪ್ರಿಂಟ್ ಆಗುತ್ತೆ?

***
ಗುಂಡ : ನಾನು ಒಂದು ದಿನ ಪೇಪರ್ ನಲ್ಲಿ ಓದಿದ್ದೆ.. ಕುಡಿಯೋದು ಜೀವಕ್ಕೆ ಹಾನಿಕರಯೆಂದು .. ಆವತ್ತಿನಿಂದ ಬಿಟ್ ಬಿಟ್ಟೆ..
ತಿಮ್ಮ : ಏನು ಬಿಟ್ ಬಿಟ್ಬಿಟ್ಟೆ?
ಗುಂಡ : ಪೇಪರ್ ಓದೋದನ್ನಾ!

***
ಜಗತ್ತಿನಲ್ಲಿ ಲಕ್ಷಾಂತರ ಮಂದಿ ಪ್ರೇಮ ಪತ್ರ ಬರೆಯುತ್ತಾರೆ..ಆದರೆ ಹೆಚ್ಚಿನವರು ಮೊದಲ ಪ್ರೇಮಪತ್ರವನ್ನು ನನಗೆ ಕಳುಹಿಸುತ್ತಾರೆ..
ನಾನು ಯಾರಿರಬಹುದು... ಊಹಿಸಿ....
...
....
ಡಸ್ಟ್ ಬಿನ್!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+