ಕೊನೆಗೂ ಏಕಾಂಗಿಯಾಗಿ ಮಲಗಿದ ಸೋಫಿಯಾ!
ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾಗಿದ್ದ ಸೋಫಿಯಾ ಎನ್ನುವ ವೇಶ್ಯೆಯೊಬ್ಬಳು ಸಾವನ್ನಪ್ಪುತ್ತಾಳೆ. ಉತ್ತಮ ಶೀರ್ಷಿಕೆಯಡಿ ಈಕೆಯ ಸಾವಿನ ಸುದ್ದಿಯನ್ನು ಯಾವ ರೀತಿ ಪ್ರಕಟಿಸುವುದೆಂದು ಪತ್ರಿಕೆಯೊಂದು ಚರ್ಚಿಸಿ ಕೊನೆಗೆ ಈ ಕೆಳಗಿನ ಶೀರ್ಷಿಕೆಯನ್ನು ಅಂತಿಮಗೊಳಿಸುತ್ತಾರೆ.
"ಕೊನೆಗೂ ಏಕಾಂಗಿಯಾಗಿ ಮಲಗಿದ ಸೋಫಿಯಾ!"
***
ರಾಜ್ಯದ ಪ್ರಮುಖ ತ್ರಿಮೂರ್ತಿ ರಾಜಕಾರಿಣಿಗಳು ಹೆಲಿಕಾಪ್ಟರ್ ನಲ್ಲಿ ಪ್ರಯಾಣಿಸುತ್ತಿದ್ದರು. ಮೊದಲ ಹಿರಿಯ ರಾಜಕಾರಿಣಿ ನೂರು ರೂಪಾಯಿ ನೋಟನ್ನು ಕೆಳಗೆ ಬೀಳಿಸಿ "ನಾನು ಒಬ್ಬ ಕನ್ನಡಿಗನನ್ನು ಸಂತೋಷ ಪಡಿಸಿದೆ" ಎನ್ನುತ್ತಾರೆ. ಮಧ್ಯ ಕುಳಿತಿದ್ದ ರಾಜಕಾರಿಣಿ ಐವತ್ತು ರೂಪಾಯಿಯ ಎರಡು ನೋಟನ್ನು ಕೆಳಗೆ ಬೀಳಿಸಿ "ನಾನು ಇಬ್ಬರು ಕನ್ನಡಿಗರನ್ನು ಸಂತೋಷ ಪಡಿಸಿದೆ" ಎನ್ನುತ್ತಾರೆ, ಕಿರಿಯ ರಾಜಕಾರಿಣಿ ಒಂದು ರೂಪಾಯಿಯ ನೂರು ನಾಣ್ಯವನ್ನು ಕೆಳಗೆ ಬೀಳಿಸಿ "ನಾನು ನೂರು ಕನ್ನಡಿಗರನ್ನು ಸಂತೋಷ ಪಡಿಸಿದೆ" ಎನ್ನುತ್ತಾರೆ. ಇದನ್ನೆಲ್ಲಾ ಗಮನಿಸುತ್ತಿದ್ದ ಪೈಲಟ್ ನಾನೀಗ ನೀವು ಮೂವರನ್ನೂ ಕೆಳಗೆ ಬೀಳಿಸಿ ಆರು ಕೋಟಿ ಕನ್ನಡಿಗರನ್ನು ಸಂತೋಷ ಪಡಿಸುತ್ತೇನೆ ಎನ್ನುತ್ತಾನೆ.
***
ಹೊಸದಾಗಿ ಮದುವೆಯಾದ ಗುಂಡ ಎರಡನೇ ದಿನವೇ ತನ್ನ ಮಡದಿಗೆ ವಿಚ್ಛೇದನ ನೀಡಲು ನಿರ್ಧರಿಸುತ್ತಾನೆ. ಯಾಕೆ ಗೊತ್ತಾ... ಆಕೆ ಧರಿಸಿದ್ದ ಒಳ ಉಡುಪಿನಲ್ಲಿ "ಒಕೆ ಟೆಸ್ಟೆಡ್.. ಚನ್ನಬಸವೇಶ್ವರ ಆಂಡ್ ಸನ್ಸ್" ಎಂದು ಬರೆದಿರುತ್ತದೆ.
***
ಟೀಚರ್ : ಯಾಕೋ ಗುಂಡ.. ನಾನು ಪಾಠ ಶುರು ಮಾಡುವ ಮೊದಲೇ ಕೈ ಮುಗಿತ್ತಿದ್ದೀಯಾ?
ಗುಂಡ : ಟೀಚರ್.. ನನ್ನ ಅಮ್ಮ ಮಲಗೋ ಮುಂಚೆ ದೇವರಿಗೆ ಕೈಮುಗಿ ಅಂತಾ ಹೇಳಿದ್ದಾರೆ!












Click it and Unblock the Notifications