ಮಿಸ್, ಮೈ ನೇಮ್ ಈಸ್ ವೇಸ್ಟ್ ವಾಟರ್!

ಮೊದಲ ವಿದ್ಯಾರ್ಥಿ : ಟೀಚರ್ ನನ್ನ ಹೆಸರು ಸಿದ್ದಪ್ಪ.
ಟೀಚರ್ : ನೋ ನೋ, ಇಂಗ್ಲಿಷ್ ನಲ್ಲಿ ಹೇಳು.
ವಿದ್ಯಾರ್ಥಿ : ರೆಡಿಮೇಡ್ ಪಾದರ್.
ಇನ್ನೊಬ್ಬ ವಿದ್ಯಾರ್ಥಿ : ಮಿಸ್, ಮೈ ನೇಮ್ ಈಸ್ ವೇಸ್ಟ್ ವಾಟರ್.
ಟೀಚರ್ : ಏನೋ ಹಾಗಂದ್ರೆ?
ಇನ್ನೊಬ್ಬ ವಿದ್ಯಾರ್ಥಿ : ದಂಡಪಾಣಿ!
***
ಮಗ : ಅಪ್ಪಾ ಬಾ ಇಲ್ಲಿ...
ಅಮ್ಮ : ನೋಡು ಅಪ್ಪನನ್ನ ಹಾಗೆಲ್ಲ ಕರೀಬಾರದು. ಮರ್ಯಾದೆಯಿಂದ ಕರೀಬೇಕು.
ಮಗ : ಅಪ್ಪಾ ಮರ್ಯಾದೆಯಿಂದ ಇಲ್ಲಿ ಬಾ..
***
ಮದುವೆ ಆದ ಮೊದಲ ದಿನ ಸೊಸೆ ಮನೆಗೆ ಬರುತ್ತಾಳೆ.
ಅತ್ತೆ : ನೋಡು ಇನ್ಮೇಲೆ ನನ್ನ ಅಮ್ಮ ಮತ್ತು ನಿನ್ ಮಾವಾನ ಅಪ್ಪಾಂತ ತಿಳ್ಕೋ...
ಸಂಜೆ ಗಂಡ ಕೆಲಸ ಮುಗಿಸಿಕೊಂಡು ಮನೆಗೆ ಬಂದಾಗ.. ಸೊಸೆ ಅಂತಾಳೆ... ಅಮ್ಮಾ ಅಣ್ಣಾ ಬಂದಾ!
***
ಗ್ಲೋಬಲೈಜೇಶನ್ (Globalization) ಎಂದರೆ ಏನು ಎನ್ನುವ ಬಗ್ಗೆ ಒಂದು ಸಮ್ಮೇಳನ ನಡೆಯುತ್ತಿತ್ತು.
ಸಮ್ಮೇಳನದಲ್ಲಿ ಮಾತನಾಡುತ್ತ ಒಬ್ಬರು, ಇಪ್ಪತ್ತು ವರ್ಷಗಳ ಹಿಂದೆ ಒಂದು ಪ್ಲೇಟ್ ಇಡ್ಲಿ ಬೆಲೆ ಐವತ್ತು ಪೈಸೆ, ಒಂದು ಎಸ್ ಟಿ ಡಿ ಕರೆಗೆ ಹದಿನೈದು ರೂಪಾಯಿ..
ಆದರೆ ಇಂದು ಒಂದು ಪ್ಲೇಟ್ ಇಡ್ಲಿ ಬೆಲೆ ಹದಿನೈದು ರೂಪಾಯಿ.. ಒಂದು ಎಸ್ ಟಿ ಡಿ ಕರೆ ಬೆಲೆ ಐವತ್ತು ಪೈಸೆ..
***
ಒಂದು ಎಸ್ಎಂಎಸ್ ನುಡಿಮುತ್ತು..
ಖುಷಿ ಇನ್ ಬಾಕ್ಷ್ ನಲ್ಲಿ.. ದುಃಖ ಔಟ್ ಬಾಕ್ಷ್ ನಲ್ಲಿ..
ನಗು ಸೆಂಡ್ ಮಾಡಿ.. ಕೋಪಾನ ಡಿಲಿಟ್ ಮಾಡಿ..
ಮನಸನ್ನಾ ವೈಬ್ರೇಟ್ ಮಾಡಿ.. ಆಗ ನೋಡಿ ಜೀವನ ಸುಂದರವಾದ ರಿಂಗ್ ಟೋನ್ ಆಗುತ್ತೆ.











Click it and Unblock the Notifications