ಈರುಳ್ಳಿ ಕೊಡಿಸ್ತೀನಿ ಐ ಲವ್ ಯೂ ಅಂತೀಯಾ?

ಹುಡುಗಿ : ಹೋಗೊಲೋ..
ಹುಡುಗ : ಡೈಮಂಡ್ ರಿಂಗ್ ಕೊಡಿಸ್ತೀನಿ, ಈಗಲಾದರೂ ಐ ಲವ್ ಯು ಅಂತ ಹೇಳು.
ಹುಡುಗಿ : ಆಗೋದಿಲ್ಲಾ..
ಹುಡುಗ : ಹೋಗ್ಲಿ.. ಒಂದು ಕೆಜಿ ಈರುಳ್ಳಿ ಕೊಡಿಸ್ತೀನಿ..
ಹುಡುಗಿ : ಓಕೆ, ಐ ಲವ್ ಯು!
***
ಅಮೆರಿಕಾ ಮತ್ತು ಭಾರತೀಯ ಪ್ರಾಂಶುಪಾಲರ ನಡುವೆ "ಎರಡು ದೇಶಗಳ ನಡುವಿನ ವಿದ್ಯಾರ್ಥಿಗಳಲ್ಲಿ ಯಾರು ಧೈರ್ಯವಂತರು" ಎನ್ನುವ ವಿಷಯದಲ್ಲಿ ಚರ್ಚೆ ನಡೆಯುತ್ತಿತ್ತು.
ಅಮೆರಿಕ : ಶಾರ್ಕ್ ಗಳು ತುಂಬಿರುವ ಕೆರೆಗೆ ಹಾರಿ ಎಂದು ತನ್ನ ವಿದ್ಯಾರ್ಥಿಗಳಿಗೆ ಸೂಚಿಸಿದೆ, ವಿದ್ಯಾರ್ಥಿಗಳು ಕೆರೆಗೆ ಧುಮುಕಿದರು. ಧೈರ್ಯ ಅಂದರೆ ಇದು ಎಂದು ಭಾರತೀಯ ಪ್ರಾಂಶುಪಾಲರಿಗೆ ಹೇಳುತ್ತಾನೆ.
ಭಾರತೀಯ : ಸ್ಟೂಡೆಂಟ್ಸ್, ನೀವೂ ಆ ಕೆರೆಗೆ ಹಾರಿ.
ಸ್ಟೂಡೆಂಟ್ : ಹೋಗಲೋ. ಲೋಫಾರ್..
ಭಾರತೀಯ ಅಮೆರಿಕಾ ಪ್ರಾಂಶುಪಾಲರಿಗೆ : ನೋಡು ನಮ್ಮ ವಿದ್ಯಾರ್ಥಿಗಳ ಧೈರ್ಯ.
***
ಟೀಚರ್ : ಲೇ ಗುಂಡ.. ಲ್ಯಾಂಡ್ ಲೈನ್ ಮತ್ತು ಮೊಬೈಲ್ ಗು ಏನೋ ವ್ಯತ್ಯಾಸ?
ಗುಂಡ : ಸಾರ್.. ಲ್ಯಾಂಡ್ ಲೈನ್ ನಂಬರ್ ಅನ್ನು ಬೆರಳಿಂದ ಒತ್ತುತ್ತೀವಿ.. ಮೊಬೈಲ್ ನಂಬರನ್ನು ಹೆಬ್ಬೆಟ್ಟಿನಿಂದ!
***
ಅಮೇರಿಕನ್ : ನಾವು ಬಳಸಿದ ಟಿಶ್ಯೂ ಪೇಪರನ್ನು ಭಾರತಕ್ಕೆ ರಫ್ತು ಮಾಡುತ್ತೇವೆ.. ನೀವು ಅದನ್ನು ಸಿಗರೇಟ್ ಗಾಗಿ ಬಳಸುತ್ತೀರಾ..
ಭಾರತೀಯ : ನಾವು ಬಳಸಿದ ಟಿಶ್ಯೂ ಪೇಪರನ್ನು ಅಮೇರಿಕಾಕ್ಕೆ ರಫ್ತು ಮಾಡುತ್ತೇವೆ.. ನೀವು ಅದನ್ನು ಚೂಯಿಂಗ್ ಗಮ್ಮಾಗಿ ಬಳಸುತ್ತೀರಾ..
***
ಟೀಚರ್ : ಗುಂಡ.. ಇಂಡಿಯಾ ಇದುವರೆಗೂ ವಿಶ್ವಕಪ್ ಫುಟ್ ಬಾಲ್ ನಲ್ಲಿ ಯಾಕೋ ಆಡಿಲ್ಲಾ?
ಗುಂಡ : ಸಾರ್.. ಮೀಸಲಾತಿ ಇರಬೇಕು.
ಟೀಚರ್ : ಏನೋ ಮೀಸಲಾತಿ?
ಗುಂಡ : 11 ಜನ ಆಟಗಾರರಲ್ಲಿ 4 ಒಬಿಸಿ, 5 ಎಸ್ ಸಿ, 2 ಎಸ್ ಟಿ ಮತ್ತು 1 ಜನರಲ್ ಮೆರಿಟ್.












Click it and Unblock the Notifications