ಬರೀ ತರ್ಲೆ ಅಲ್ಲ, ಸಿಕ್ಕಾಪಟ್ಟೆ ತರ್ಲೆ ಜೋಕ್ಸ್!

Funny jokes in Kannada
ಟೀಚರ್ (ಸಿಟ್ಟಿನಿಂದ) : ಲೇ ಗುಂಡ, ನೀನು ಮುಂದಿನ ಜನ್ಮದಲ್ಲಿ ನಾಯಿಯಾಗಿ ಹುಟ್ಟು.
ಗುಂಡ (ಮನಸ್ಸಿನಲ್ಲೇ) : ನೀವು ಮುಂದಿನ ಜನ್ಮದಲ್ಲಿ ಲೈಟ್ ಕಂಬವಾಗಿ ಹುಟ್ಟಿ, ಆವಾಗ ನೋಡ್ಕೋತೀನಿ.

***

ಗುಂಡ : ನಿನಗೆ ಪ್ರೀತಿ ಮುಖ್ಯನಾ, ಸ್ನೇಹ ಮುಖ್ಯನಾ? ಸರಿಯಾಗಿ ಆಲೋಚನೆ ಮಾಡಿ ಹೇಳು.
ತಿಮ್ಮ : ನನಗೆ ಪ್ರೀತಿ ಮುಖ್ಯ, ನಿನಗೆ?
ಗುಂಡ : ನನಗೆ ಸ್ನೇಹ ಮುಖ್ಯ. ಯಾಕೆಂದ್ರೆ, ಪ್ರೀತಿಗೆ ಮದುವೆಯಾಗಿದೆ. ಸ್ನೇಹ ಇನ್ನು ಡಿಗ್ರಿ ಓದುತ್ತಿದ್ದಾಳೆ.

***

ಅಮೆರಿಕನ್ನರ ಜೀವನದ ಶೈಲಿ...
ಮಗಳು : ಸಾರಿ ಡ್ಯಾಡ್, ನನಗೆ ನಿನ್ನೆ ಮದುವೆ ಆಯಿತು. ನಿನಗೆ ಹೇಳಲು ಮರೆತು ಹೋಯಿತು. ಡೋಂಟ್ ಫೀಲ್ ಬ್ಯಾಡ್.
ತಂದೆ : ಇಟ್ಸ್ ಓಕೆ, ಬಟ್ ನೆಕ್ಸ್ಟ್ ಟೈಮ್ ಮಾತ್ರ ಮರೀ ಬೇಡ!

***

ಟೀಚರ್ : ವಿದ್ಯಾರ್ಥಿಗಳು ಒಳ್ಳೆ ಮನಸ್ಸಿನಿಂದ ಪ್ರಾರ್ಥನೆ ಮಾಡಿದರೆ ದೇವ್ರು ಯಾವ ವರ ಬೇಕಾದರೂ ಕೊಡ್ತಾನೆ.
ಗುಂಡ : ಅಯ್ಯೋ ಸುಮ್ನಿರಿ ಟೀಚರ್, ಅದು ನಿಜಾನೆ ಆಗಿದ್ರೆ ಇಷ್ಟೊತ್ತಿಗೆ ನೀವು ನನ್ನ ವೈಫ್ ಆಗಿರ್ತಿದ್ರಿ!

***

ಹುಡುಗಿರ ಲೈಫ್ ನೀರಿನ ತರಹ...
ಹುಡುಗರ ಲೈಫ್ ಮೊಬೈಲ್ ತರಹ...
ಮೊಬೈಲ್ ನೀರಿಗೆ ಬಿದ್ದರೂ ಅಥವಾ ನೀರು ಮೊಬೈಲ್ ಮೇಲೆ ಬಿದ್ದರೂ.. ಹಾಳಾಗುವುದು ಮೊಬೈಲ್ ಮಾತ್ರಾ!

***

ನಾಯಿಯೊಂದು ಬೆಕ್ಕನ್ನು ಅಗಾಧವಾಗಿ ಪ್ರೀತಿಸಲು ಆರಂಭಿಸಿತು..
ತನ್ನ ಪ್ರೀತಿಯ ವಿಷಯವನ್ನು ಮನೆಯವರ ಬಳಿ ತೋಡಿಕೊಂಡಿತು..
ನಾಯಿಯ ಮನೆಯವರು ಈ ಸಂಬಂಧವನ್ನು ನಿರಾಕರಿಸಿದರು..
ಏನಕ್ಕೆಂದರೆ.. ಛೆ.. ಹುಡುಗಿಗೆ ಮೀಸೆ ಇದೆ!

***

ಒಬ್ಬ ಹುಡುಗ ರಜನೀಕಾಂತ್ ಮನೆ ಮುಂದೆ ಕ್ರಿಕೆಟ್ ಆಡುತ್ತಿದ್ದ..
ಹುಡುಗ ಹೊಡೆದ ರಭಸಕ್ಕೆ ರಜನೀಕಾಂತ್ ಮನೆಯ ಕಿಟಕಿ ಒಡೆದು ಹೋಯಿತು..
ರಜನಿ ಬಾಲ್ ಹಿಡಿದು ಹುಡುಗನಿಗೆ ನಿಧಾನವಾಗಿ ಆಡು ಎಂದು ಉಪದೇಶಿಸಿದರು..
ಆ ಹುಡುಗ ಮತ್ಯಾರೂ ಅಲ್ಲ.. ರಾಹುಲ್ ದ್ರಾವಿಡ್!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+