ಓದಲು ಸೊಗಸು ಎಸ್ಎಮ್ಎಸ್ ಜೋಕ್ಸು!

ಗುಂಡ : ಮೆಲ್ಲಕ್ಕೆ ಹೇಳಿ ಡಾಕ್ಟರ್, ಹೊರಗೆ ನನ್ನ ನಾಯಿ ನಿಂತಿದೆ!
***
ಗುಂಡ ಬಸ್ ಸ್ಟೇಶನ್ ಮುಂದೆ ಸೂಸು ಮಾಡುತ್ತಿದ್ದ.
ಪೊಲೀಸ್ : ಲೇ ಹುಡುಗ, ಇಲ್ಲಿ ಸೂಸು ಮಾಡಬಾರದು, ಮಾಡಿದ್ರೆ ಹಿಡ್ಕೊಂಡು ಹೋಗ್ತೀನಿ.
ಗುಂಡ : ಹಿಡ್ಕೊಂಡು ಹೋಗಿ ಸಾರ್, ಸುಮ್ನೆ ವೇಸ್ಟ್ ಆಗ್ತಿದೆ!
***
ಗುಂಡ : ಲೋ ತಿಮ್ಮ, ನಿನ್ನೆ ನನ್ನ ಅಜ್ಜಿ ಬಾವಿಗೆ ಬಿದ್ದು ತುಂಬಾ ಕೂಗ್ತಾ ಇದ್ರು ಕಣೋ.
ತಿಮ್ಮ : ಹೌದೇನೋ, ಈಗ ಹೇಗಿದ್ದಾರೆ?
ಗುಂಡ : ಈಗ ಬಹುಶಃ ಚೆನ್ನಾಗಿ ಇರಬೇಕು, ಬಾವಿಯಿಂದ ಯಾವುದೇ ಸದ್ದು ಬರ್ತಿಲ್ಲಾ.
***
ಹೆಂಡತಿ ಜೊತೆ ಸಂಸಾರ ನಡೆಸುವುದು : ಪಾರ್ಟ್ ಆಫ್ ಲೀವಿಂಗ್.
ಹೆಂಡತಿ ಜೊತೆ ಇನ್ನೊಬ್ಬಳನ್ನು ಇಟ್ಟುಕೊಂಡು ಸಂಸಾರ ನಡೆಸುವುದು : ಆರ್ಟ್ ಆಫ್ ಲೀವಿಂಗ್!
***
ಒಬ್ಬ ಭಗ್ನ ಪ್ರೇಮಿ...
ಹುಡುಗೀರ ಮಾತು ಕಾಮನಬಿಲ್ಲು, ಪುಟ್ಟ ಅಂತ ಹೇಳಿ ಚಟ್ಟ ಏರಿಸ್ತಾರೆ
ಡಿಯರ್ ಡಿಯರ್ ಅಂತ ಹೇಳಿ ಬಿಯರ್ ಕುಡಿಸ್ತಾರೆ ಆಮೇಲೆ ಕೈ ಕೊಡ್ತಾರೆ
ಸಾರಿ ಎಂದು ಹೇಳಿ ನಮ್ಮ ಗೋರಿ ಮೇಲೆ ಲಗೋರಿ ಆಡ್ತಾರೆ!
***
ಚಾರ್ಲಿ ಚಾಪ್ಲಿನ್ ಹೇಳಿದ ಮಾತು ಎಷ್ಟು ಅರ್ಥಗರ್ಭಿತ...
ಕನ್ನಡಿ ನನ್ನ ಆತ್ಮೀಯ ಸ್ನೇಹಿತ, ಯಾಕೆಂದರೆ ನಾನು ಅದರ ಮುಂದೆ ನಿಂತು ಅತ್ತರೆ ಅದು ನನ್ನನ್ನು ನೋಡಿ ನಗುವುದಿಲ್ಲ.
ಇಂಗ್ಲಿಷ್ ಲಿಪಿಯಲ್ಲಿ ಕನ್ನಡ ಎಸ್ಎಮ್ಎಸ್ | ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7











Click it and Unblock the Notifications