ಅಯ್ಯೋ, ಮನೇಲಿ ನನ್ ಹೆಂಡ್ತಿ ಒಬ್ಳೇ ಇದ್ದಾಳೆ!

Jokes for the day
ತಿಮ್ಮ ಒಂದೇ ಉಸಿರಿನಲ್ಲಿ ರಸ್ತೆಯಲ್ಲಿ ಓಡುತ್ತಿದ್ದ.
ಗುಂಡ : ಲೇ ತಿಮ್ಮ, ಯಾಕೋ ಹಂಗೆ ಓಡುತ್ತಿದ್ದೀಯಾ?
ತಿಮ್ಮ : ಸಚಿವರು ವೋಟ್ ಕೇಳೋಕೆ ಬರುತ್ತಿದ್ದಾರೆ, ಮನೆಯಲ್ಲಿ ನನ್ನ ಹೆಂಡ್ತಿ ಒಬ್ಳೇ ಇದ್ದಾಳೆ.
ಗುಂಡ : ಯಾವ ಸಚಿವ?
ತಿಮ್ಮ : ಹಾಲಪ್ಪ...

***

ಪೊಲೀಸ್ :
ನಿನಗೆ ನಾಳೆ ಬೆಳಗ್ಗೆ ಐದು ಗಂಟೆಗೆ ಗಲ್ಲು ಶಿಕ್ಷೆ...
ಕೈದಿ : ಹ...ಹ...ಹ...
ಪೊಲೀಸ್ : ಯಾಕೆ ನಗುತ್ತಿದ್ದೀಯಾ?
ಕೈದಿ : ಹೋಗ್ರೀ.. ನಾನು ಬೆಳಗ್ಗೆ ಎದ್ದೇಳೋದೆ ಏಳು ಗಂಟೆಗೆ!

***

ಗುಂಡ ಬಸ್ ನಲ್ಲಿ ನಿಂತುಕೊಂಡೇ ಪ್ರಯಾಣಿಸುತ್ತಿದ್ದ.
ಮತ್ತೊಬ್ಬ ಪ್ರಯಾಣಿಕ : ಸುಮ್ನೆ ಯಾಕಪ್ಪಾ ನಿಂತುಕೊಂಡೇ ಇದ್ದೀಯಾ? ಸೀಟ್ ಖಾಲಿ ಇದೆಯಲ್ಲಾ, ಬಾ ಕೂತ್ಕೋ.
ಗುಂಡ : ಬೇಡ ಬಿಡಿ ಸಾರ್, ಈಗಾಗಲೇ ಲೇಟ್ ಆಗಿದೆ. ಕೂತ್ಕೊಂಡು ಹೋದ್ರೆ ಇನ್ನೂ ಲೇಟ್ ಆಗುತ್ತೆ.

***

ಗುಂಡ : ಗುರುಗಳೇ ನೀವು ಬರೆದ ಪುಸ್ತಕ ನನಗಿಂದು ದಾರಿದೀಪವಾಯಿತು.
ಗುರು : ತುಂಬಾ ಸಂತೋಷ ಗುಂಡ. ಅದು ಹೇಗೆ?
ಗುಂಡ : ಗುರುಗಳೇ, ನಿನ್ನೆ ರಾತ್ರಿ ಮನೆಗೆ ಬರಬೇಕಾದ್ರೆ ಲೈಟ್ ಇರಲಿಲ್ಲ, ನಿಮ್ಮ ಪುಸ್ತಕಕ್ಕೆ ಬೆಂಕೆ ಹಚ್ಚಿ ದಾರಿ ದೀಪ ಮಾಡಿಕೊಂಡು ಬಂದೆ!

***

ಪತ್ನಿ : (ಕನ್ನಡಿಯಲ್ಲಿ ತನ್ನ ಮುಖವನ್ನು ನೋಡುತ್ತಾ) ಛೆ, ನೋಡೋಕೆ ನಾನು ಎಷ್ಟು ಗಲೀಜಾಗಿದ್ದೀನಲ್ಲಾ? ರೀ ಏನಾದ್ರೂ ನನ್ನ ಬಗ್ಗೆ ಒಳ್ಳೆ ಮಾತಾಡ್ರೀ...
ಪತಿ : ನಿನ್ನ ಐ ಸೈಟ್ ಕರೆಕ್ಟಾಗಿದೆ.

ಇಂಗ್ಲಿಷ್ ಲಿಪಿಯಲ್ಲಿ ಕನ್ನಡ ಎಸ್ಎಮ್ಎಸ್ | ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+