ಪಾಠ ಹೇಳ್ ಕೊಡೊ ಗುಣಮಟ್ಟ ನೋಡಿದ್ರೆ..

ಗುಂಡಾ : ಸರ್ರಾ.. ಕಡಿಮೆ ಕಲಿತ್ರೇ ನಕ್ಸಲೈಟ್, ಜಾಸ್ತಿ ಓದಿದ್ರೆ ಟೆರರಿಸ್ಟ್, ಏನೂ ಓದಿಲ್ಲಾ ಅನ್ಕೋಳ್ರೀ.. ರಾಜಕಾರಿಣಿ.
ಟೀಚರ್ : ನೀನೇನಾಕ್ತೀ..
ಗುಂಡ : ರಾಜಕಾರಿಣಿ
ಟೀಚರ್ : ಎಕ್ಸಪ್ಲನೇಷನ್ ಕೊಡು.
ಗುಂಡ : ತಾವು ಪಾಠ ಹೇಳ್ ಕೊಡೊ ಗುಣಮಟ್ಟ ನೋಡಿದ್ರೆ ಇದಕಿಂತ ಹೆಚ್ಚು ಇನ್ನೇನ್ ಆಗೋಕಾಗುತ್ತೆ?
***
ಕೊನೆಯುಸಿರುಯೆಳೆಯುತ್ತಿರುವ ಪತಿ ಪತ್ನಿಗೆ (ದವಾಖಾನೆಯಿಂದ ನೇರ ಪ್ರಸಾರ) : ನೋಡಲೇ, ಈ ಆಪರೇಷನ್ ನಲ್ಲಿ ನಾನೇನಾದ್ರೂ ಸತ್ತೇ ಹೋದ್ರೇ.. ಆಪರೇಷನ್ ಮಾಡ್ದ ಡಾಕ್ಟ್ರನಾ ಸುಮ್ಕೆ ಬಿಡ್ಬೇಡಾ.
ಪತ್ನಿ : ನಾ ಏನ್ ಮಾಡ್ಲೀ..
ಪತಿ : ನೀ ಆ ಡಾಕ್ಟರನ್ನೇ ಮದುವೆಯಾಗು..
ಪತ್ನಿ : ಯಾಕ್ರೀ ಇಂಗೆ ಮಾತಾಡಕತ್ತೀರಿ?
ಪತಿ : ಮತ್ತಿನ್ನೇನು ಆ ಡಾಕ್ಟರ್ ನ ಸುಮ್ಕೆ ಕ್ಷಮಿಸಕ್ಕಾಗುತ್ತಾ..
***
ಕ್ಯಾಮರಮ್ಯಾನ್ ಜೊತೆ "ಅನಿತಾ" ಟಿವಿ 9 ಮಂಗಳೂರ್
ಕ್ಯಾಮರಮ್ಯಾನ್ ಜೊತೆ "ಸುಗುಣಾ" ಟಿವಿ 9 ಗುಲ್ಬರ್ಗಾ
ಕ್ಯಾಮರಮ್ಯಾನ್ ಜೊತೆ "ಉಷಾ" ಟಿವಿ 9 ಹುಬ್ಳೀ
ಈ ಕ್ಯಾಮರಮ್ಯಾನ್ ಏನ್ ಲಕ್ಕೀ ಅದಾನ್ಲೇ












Click it and Unblock the Notifications