ನಗೋಕೆ ಜಿಪುಣತನ ಯಾಕೆ, ಸುಮ್ನೆ ಒಸಿ ನಗ್ರೀ

Jokes for the day
ಅಪ್ಪ : ಈ ಹೊಸ ಚೇರ್ ಎಲ್ಲಿಂದ ತಂದೆ?
ಮಗ : ಸಂದರ್ಶನಕ್ಕೆ ಹೋಗಿದ್ದೆ ಅಪ್ಪ.
ಅಪ್ಪ : ನಾನು ಕೇಳಿದ್ದು ಚೇರ್ ಎಲ್ಲಿಂದ ತಂದೆ?
ಮಗ : ಸಂದರ್ಶನಕ್ಕೆ ಹೋಗಿದ್ದ ಕಚೇರಿಯಲ್ಲಿ "Take your seat" ಅಂದ್ರೂ ಅದಕ್ಕೆ ತಗೊಬಂದೆ!

***

ಹುಡುಗ : ನನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡು, ನಿನಗೆ ಏನು ಅನಿಸುತ್ತಿದೆ, ಬೇಗ ಹೇಳು.
ಹುಡುಗಿ : ನೀನು ನನ್ನ ಮೇಲಿಟ್ಟಿರುವ ಪ್ರೀತಿ ಕಾಣಿಸುತ್ತಿದೆ.
ಹುಡುಗ : ನಿನ್ ಪಿಂಡ, ಕಣ್ಣಲ್ಲಿ ಏನಾದರೂ ಕಸ ಹೋಗಿದೆಯಾ ನೋಡು ಅಂದ್ರೇ...

***

ವೈದ್ಯ : ನೀನು ಯಾವ ಸೋಪ್ ಬಳಸುತ್ತೀಯಾ?
ಗುಂಡ : ಗೋಪಾಲ್ ಸೋಪ್, ಗೋಪಾಲ್ ಪೇಸ್ಟ್, ಗೋಪಾಲ್ ಬ್ರಷ್...
ವೈದ್ಯ : ಓಹೋ, ಗೋಪಾಲ್ ಅಂತಾರಾಷ್ಟ್ರೀಯ ಸಂಸ್ಥೆಯೇ?
ಗುಂಡ : ಇಲ್ಲ ಗೋಪಾಲ್ ಅನ್ನುವವನು ನನ್ನ ರೂಂಮೇಟ್!

***

ಜೇಮ್ಸ್ ಬಾಂಡ್ ರಜನಿ ಚಿತ್ರ ನೋಡಿದ ನಂತರ ಆತ್ಮಹತ್ಯೆ ಮಾಡಿಕೊಂಡನಂತೆ! ಯಾಕಿರಬಹುದು?
ರಜನಿ ಬಳಿ ಬುಲೆಟ್ ರಹಿತ ಪಿಸ್ತೂಲ್ ಇತ್ತು, ಖಳ ನಟ ರಜನಿ ಮೇಲೆ ಗುಂಡು ಚಲಾಯಿಸಿದ.. ಆಮೇಲೆ..
ಸ್ಟೈಲ್ ಕಿಂಗ್ ರಜನಿ ಆ ಬುಲೆಟ್ ಹಿಡಿದು, ಅದನ್ನೇ ತನ್ನ ಪಿಸ್ತೂಲ್ ಗೆ ಸೇರಿಸಿ ಗುಂಡು ಚಲಾಯಿಸಿ ಖಳನಟನನ್ನು ಕೊಂದ. ಅದನ್ನು ನೋಡಿ ಜೇಮ್ಸ್ ಬಾಂಡ್...

***

ಟೀಚರ್ : ಡಿಯರ್ ಸ್ಟೂಡೆಂಟ್ಸ್, ನೋಡಿ ಈಗ ನಾನು ಆಲ್ಕೊಹಾಲಿಗೆ ಕ್ರಿಮಿಕೀಟವನ್ನು ಹಾಕುತ್ತೇನೆ, ನೋಡಿದ್ರಾ ಕ್ರಿಮಿಕೀಟಗಳು ಹೇಗೆ ಸತ್ತುಹೋದವು.
ನೋಡಿದ್ರಾ, ಆಲ್ಕೋಹಾಲ್ ಆರೋಗ್ಯಕ್ಕೆ ಎಷ್ಟು ಅಪಾಯಕಾರಿಯೆಂದು. ಇದು ಏನು ನಿಮಗೆ ಪಾಠ ಕಲಿಸುತ್ತದೆ?
ಸ್ಟೂಡೆಂಟ್ : ಆಲ್ಕೋಹಾಲ್ ನಮ್ಮ ಹೊಟ್ಟೆಯಲ್ಲಿರುವ ಎಲ್ಲಾ ಕ್ರಿಮಿಕೀಟಗಳನ್ನು ನಾಶಮಾಡುತ್ತದೆ ಟೀಚರ್!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+