ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರೆಂಟ್ ವೈರನ್ನು ತುಂಬಾ ಮೇಲಕ್ಕೆ ಏಕೆ ಕಟ್ಟಿರ್ತಾರೆ?

By Prasad
|
Google Oneindia Kannada News

SMS jokes
ಶಿಕ್ಷಕಿ : ಮಕ್ಕಳೆ, ವಿದ್ಯುತ್ ತಂತಿಯನ್ನು ಕೈಗೆಟುಕದಂತೆ ಯಾಕೆ ಮೇಲೆ ಕಟ್ಟಿರ್ತಾರೆ ಹೇಳಿ?
ಗುಂಡ : ಮಿಸ್, ಕೆಳಗೆ ಕಟ್ಟಿದ್ರೆ ನಮ್ಮಮ್ಮ ಅದರ ಮೇಲೆ ಬಟ್ಟೆ ಒಣಗಿಸಲು ಹಾಕಿಬಿಡುತ್ತಾಳೆ!

***

ಪತ್ರಕರ್ತ : ಮುಖ್ಯಮಂತ್ರಿಗಳೆ, ಇತ್ತೀಚಿನ ದಿನಗಳಲ್ಲಿ ನಿಮ್ಮ ಸರಕಾರ ವಿದ್ಯುತ್ ಸಿಕ್ಕಾಪಟ್ಟೆ ಕಟ್ ಮಾಡ್ತಿದೆಯಲ್ಲಾ?
ಮುಖ್ಯಮಂತ್ರಿ : ಕರೆಂಟ್ ಕೊಟ್ರೆ, ಜನ ನಮ್ಮನ್ನು ಬೈಯೋದನ್ನೆಲ್ಲಾ ನೇರವಾಗಿ ಪ್ರಸಾರ ಮಾಡಿಬಿಡ್ತೀರಲ್ಲಾ ಅದಕ್ಕೆ!

***

ಸರ್ದಾರ್ಜಿ : ಓಯ್, ನನ್ನ ಮೊಬೈಲಿಗೆ ಕನ್ನಡ ಹಾಡುಗಳನ್ನು ಡೌನ್ ಲೋಡ್ ಮಾಡಿ ಕೊಡ್ತೀರಾ?
ಅಂಗಡಿಯವ : ಸರ್ದಾರ್ಜಿ, ನಿಮ್ಮ ಬಳಿ ಮೆಮೊರಿ ಕಾರ್ಡ್ ಇದೆಯಾ?
ಸರ್ದಾರ್ಜಿ : ಇಲ್ಲ, ರೇಷನ್ ಕಾರ್ಡ್ ಇದೆ.
ಅಂಗಡಿಯವ : ಹಾಗಿದ್ರೆ, ನ್ಯಾಯಬೆಲೆ ಅಂಗಡಿಯವನಿಂದ ಸಾಂಗ್ ಡೌನ್ ಲೋಡ್ ಮಾಡಿಸಿಕೊಳ್ಳಿ!

***

ಪತ್ನಿ ಪತಿಗೆ : ರೀ, ನಿಮಗೆ ಎಷ್ಟು ಬಾರಿ ಹೇಳಿಲ್ಲ. ಕೆಲಸ ಮಾಡುವಾಗ ಕಿಸ್ ಮಾಡಬೇಡಿ ಅಂತ.
ಕೆಲಸದವಳು : ಸ್ವಲ್ಪ ಬುದ್ಧಿ ಹೇಳಿ ಅಮ್ಮಾವ್ರೆ, ನನಗಂತೂ ಹೇಳಿ ಹೇಳಿ ಸಾಕಾಗಿ ಹೋಗಿದೆ!

***

ಶಿಕ್ಷಕಿ : ಎರಡು ರೇಷ್ಮೆ ಹುಳುಗಳ ನಡುವೆ ರನ್ನಿಂಗ್ ರೇಸ್ ಇಟ್ರೆ ಏನಾಗುತ್ತೆ ಹೇಳಿ?
ಪುಟ್ಟ : ಟೈ!

ಎಸ್ಎಮ್ಎಸ್ ಜೋಕ್ಸನ್ನು ಕಳಿಸಿದವರು : ಬಾಲ್ರಾಜ್

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X