ಮುಂದಿನ ಗುರಿ? ನಾವಿಬ್ಬರು ನಮಗಿಬ್ಬರು!

ವಿದ್ಯಾರ್ಥಿ : ಮದುವೆ!
ಶಿಕ್ಷಕ : ಅಲ್ಲ, ನಾನು ಕೇಳಿದ್ದು, ನೀನು ದೊಡ್ಡವನಾದ ಮೇಲೆ ಏನು ಆಗಬೇಕಂತ ಅನ್ಕೊಂಡಿದ್ದಿಯಾ?
ವಿದ್ಯಾರ್ಥಿ : ಮದುಮಗ!
ಶಿಕ್ಷಕ : ಹಾಗಲ್ಲ, ನೀನು ಬೆಳೆದ ಮೇಲೆ ಏನು ಗಳಿಸಬೇಕು ಅಥವಾ ಏನು ಸಾಧಿಸಬೇಕಂತ ಇದ್ದಿಯಾ?
ವಿದ್ಯಾರ್ಥಿ : ಮದುಮಗಳು
ಶಿಕ್ಷಕ : ಮೂರ್ಖ, ದೊಡ್ಡವನಾದ ಮೇಲೆ ಅಪ್ಪ ಅಮ್ಮನಿಗಾಗಿ ಏನು ಮಾಡಬೇಕಂತ ಮಾಡಿದ್ದೀಯಾ?
ವಿದ್ಯಾರ್ಥಿ : ಸೊಸೆಯನ್ನ ಕರಕೊಂಡು ಬರ್ತೀನಿ.
ಶಿಕ್ಷಕ : ಅಲ್ಲಪ್ಪ, ನಿನ್ನಪ್ಪ ನಿನ್ನಿಂದ ಏನು ನಿರೀಕ್ಷಿಸ್ತಾ ಇದ್ದಾರೆ?
ವಿದ್ಯಾರ್ಥಿ : ಮೊಮ್ಮಗ
ಶಿಕ್ಷಕ : ಅಯ್ಯೋ ದೇವರೆ! ಮೂರ್ಖ ಶಿಖಾಮಣಿ, ನಿನ್ನ ಮುಂದಿನ ಗುರಿಯಾದರೂ ಏನು?
ವಿದ್ಯಾರ್ಥಿ : ನಾವಿಬ್ಬರು ನಮಗಿಬ್ಬರು!!!
ಜೋಕ್ ಕಳಿಸಿದವರು : ಬಿವಿ ಕೃಷ್ಣಮೂರ್ತಿ, ಬೆಂಗಳೂರು.
ನಿಮ್ಮ ಮೊಬೈಲ್ ನಲ್ಲಿ ದಟ್ಸ್ ಕನ್ನಡ ಪ್ರತ್ಯಕ್ಷ












Click it and Unblock the Notifications