ವಾಹ್ ವಾಹ್, ಪರ್ಗತ್ ಸಿಂಗ್ ಅದ್ಭುತ ಶಾಯರಿ

Sardarji jokes
ಪರ್ಗತ್ ಸಿಂಗ್ ಅವರ ಅದ್ಭುತ ಶಾಯರಿ ಕೇಳಿ ಆನಂದಿಸಿ.

"ಕಿಟಕಿಯಿಂದ ರಸ್ತೆಯಲಿ ನೋಡಿದರೆ, ರಸ್ತೆಯಲ್ಲಿ ಯಾರೂ ಇರಲಿಲ್ಲ."

ವಾಹ್ ವಾಹ್ ಎಲ್ಲ ಕಡೆಯಿಂದಲೂ ಕರತಾಡನ. ಮುಂದುವರಿದು...

"ಕಿಟಕಿಯಿಂದ ರಸ್ತೆಯಲಿ ನೋಡಿದರೆ, ರಸ್ತೆಯಲ್ಲಿ ಯಾರೂ ಇರಲಿಲ್ಲ... ರಸ್ತೆಯಿಂದ ಕಿಟಕಿಯಲಿ ನೋಡಿದರೆ ಕಿಟಕಿಯಲೂ ಯಾರೂ ಇರಲಿಲ್ಲ!"

***

ಮ್ಯಾರಾಥಾನ್ ರೇಸ್ ನೋಡಲು ಬಂದಿದ್ದ ಪರ್ಗತ್ ಸಿಂಗ್ ಪಕ್ಕದಲ್ಲಿ ನಿಂತಿದ್ದವನನ್ನು ಕೇಳಿದ,

"ಯಾಕೆ ಎಲ್ಲಾ ಓಡ್ತಿದ್ದಾರೆ?"

ಪಕ್ಕದಲ್ಲಿದ್ದವ "ಅಲ್ಲಿ ಮ್ಯಾರಾಥಾನ್ ನಡೀತಿದೆ. ರೇಸಲ್ಲಿ ಗೆದ್ದವನಿಗೆ ಟ್ರೋಫಿ ಕೊಡುತ್ತಾರೆ."

ಅದಕ್ಕೆ ಪರ್ಗತ್ ಸಿಂಗ್, "ಅವನೊಬ್ಬನಿಗೇ ಟ್ರೋಫಿ ಕೊಡುವುದುದಾಗದೆ, ಹುಚ್ಚರು ಉಳಿದವರು ಏಕೆ ಓಡಬೇಕು?"

***

ಒಂದು ಬಾರಿ 18 ಸರ್ದಾರ್ಜಿಗಳು ಸೇರಿ ಒಂದು ಸಿನೆಮಾ ನೋಡಲು ಹೋಗುತ್ತಾರೆ. ಹದಿನೆಂಟು ಜನರೇ ಏಕೆ?

ಏಕೆಂದರೆ, Below 18 not allowed ಅಂತ ಬೋರ್ಡ್ ಹಾಕಿರ್ತಾರೆ.

***

ಪರ್ಗತ್ ಸಿಂಗ್ ಗೆ ಪಾರ್ಟಿಗೆ ಆಹ್ವಾನ ನೀಡಲಾಗಿರುತ್ತದೆ. ಇನ್ವಿಟೇಷನ್ನಿನಲ್ಲಿ 'ಬ್ಲಾಕ್ ಟೈ ಓನ್ಲಿ' ಅಂತ ನಮೂದಿಸಿರುತ್ತಾರೆ.

ಪಾರ್ಟಿಗೆ ಹೋದ ಸಿಂಗ್ ಗೆ ಭಾರೀ ಆಶ್ಚರ್ಯವಾಗುತ್ತದೆ. ಏಕೆಂದರೆ, ಪಾರ್ಟಿಗೆ ಉಳಿದವರೆಲ್ಲ ಪ್ಯಾಂಟ್, ಶರ್ಟ್ ಕೂಡ ಧರಿಸಿರುತ್ತಾರೆ!

***

ಬಲ್ಜಿತ್ ಸಿಂಗ್ ಗಹಗಹಿಸಿ ನಗುತ್ತಿರುತ್ತಾನೆ. ಏಕೆಂದು ಸ್ನೇಹಿತ ಕೇಳಿದಾಗ, "ನಿನ್ನೆ ರಾತ್ರಿ ಸೊಳ್ಳೆಗಳನ್ನು ಮೂರ್ಖರನ್ನಾಗಿ ಮಾಡಿದೆ" ಅಂತ ಮಾಳಿಗೆ ಕಿತ್ತುಹೋಗುವಂತೆ ನಗು ಮುಂದುವರಿಸುತ್ತಾನೆ.

ಯಾಕೆ ಏನಾಯ್ತು, ಅಂತ ಸ್ನೇಹಿತ ಪ್ರಶ್ನಿಸುತ್ತಾನೆ.

"ಹಾಸಿಗೆಗೆ ಸೊಳ್ಳೆ ಪರದೆ ಕಟ್ಟಿ ನಾನು ಹೊರಗಡೆ ಮಲಗಿಬಿಟ್ಟೆ!"

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+