ಈ ಸೆಲ್ ಫೋನ್ ಯಾರದ್ದು?

'ಹಲೋ?"
'ಹಲೋ, ಹನಿ. ನಾನು, ಗೊತ್ತಾಯಿತಾ. ನೀನು ಕ್ಲಬ್ಬಲ್ಲಿದ್ದಿಯೇನು?"
'ಹ್ಞಾಂ"
'ಒಳ್ಳೆಯದಾಯಿತು. ನಾನು ಕ್ಲಬ್‌ಗೆ ಹತ್ತಿರದಲ್ಲೇ ಇದ್ದೇನೆ. ಇಲ್ಲೊಂದು ಮಿಂಕ್ ಕೋಟು ನೋಡಿದೆ. ತುಂಬಾ ಚೆನ್ನಾಗಿದೆ. 1.5 ಸಾವಿರ ಡಾಲರ್ ಮಾತ್ರ. ತಗೊಳ್ಳಲಾ?"
'ಅನುಮಾನ ಯಾಕೆ ? ನಿನಗೆ ಇಷ್ಟವಾದರೆ ತಗೋ."
'ಥ್ಯಾಂಕ್ಸ್ ಸ್ವೀಟಿ. ಆಮೇಲೆ, ನಾನೊಂದು ಮರ್ಸಿಡಿಸ್ ಕಾರಿನ ಮಳಿಗೆಗೆ ಹೋಗಿದ್ದೆ. ಹೊಸ ಡಿಸೈನಿನ ಕಾರುಗಳು ಬಂದಿವೆ. ಬೆಲೆಯೂ ಪರವಾಗಿಲ್ಲ ಅನ್ನಿಸಿತು. ಕಳೆದ ವರ್ಷ ತಗೊಂಡಿದ್ದೆವಲ್ಲ, ಆ ಕಾರನ್ನು ಎಕ್ಸ್‌ಚೇಂಜ್ ಮಾಡಿಕೊಡುವುದಾಗಿ ಹೇಳಿದ್ದಾರೆ..."
'ಮರ್ಸಿಡಿಸ್ ಬೆಲೆ ಎಷ್ಟು ?"
'ಕೇವಲ 60 ಸಾವಿರ ಡಾಲರ್"
'ಆಯ್ತು. ಆದರೆ ಕೊಳ್ಳುವ ಮುನ್ನ ಇನ್ನೊಂದು ಸಾರಿ ಯೋಚಿಸು."
'ಗ್ರೇಟ್. ಇನ್ನೊಂದು ವಿಷಯವಿದೆ. ಕಳೆದ ವರ್ಷ ನಾವೊಂದು ಬಂಗ್ಲೆ ನೋಡಿದ್ದೆವಲ್ಲ. ನಿನಗೆ ನೆನಪಿದೆಯಾ? ಸ್ವಿಮ್ಮಿಂಗ್ ಪೂಲ್, ಕೈತೋಟ ಇತ್ತಲ್ಲ, ಅದೇ ಸುಂದರ ಬಂಗ್ಲೆ. ಬೆಳಗ್ಗೆ ಆ ಬ್ರೋಕರ್ ಸಿಕ್ಕಿದ್ದ. ಬಂಗ್ಲೆ ಮಾರಾಟಕ್ಕಿದೆಯಂತೆ. 4.5 ಲಕ್ಷ ಡಾಲರ್ ಬೆಲೆ ಹೇಳ್ತಿದಾನೆ. ತಗೊಳ್ಳೋಣವಾ?"
'ಸರಿ. 4.2 ಲಕ್ಷ ಡಾಲರ್‌ಗೆ ಚೌಕಾಸಿ ಮಾಡು. ಬ್ಯಾಂಕ್ ಬ್ಯಾಲೆನ್ಸ್ ಎಷ್ಟಿದೆ ಅಂತ ನೋಡಿಕೋ.."
' ಅದನ್ನು ಕೊಳ್ಳುವಷ್ಟು ಬ್ಯಾಂಕ್ ಬ್ಯಾಲೇನ್ಸ್ ನಮ್ಮ ಹತ್ರ ಇದೆ ಡಾರ್ಲಿಂಗ್"
'ಗ್ರೇಟ್!"
'ಓಕೆ, ಸ್ವೀಟಿ, ಐ ಲವ್ ಯೂ."
'ಐ ಲವ್ ಯೂ, ಟೂ- ಬಾಯ್"
'ಬಾ...ಯ್".
ಸ್ವೀಟಿ ಜೊತೆ ಇಷ್ಟು ಮಾತಾಡಿ ಸೆಲ್ ಫೋನಿನ ಫ್ಲ್ಯಾಪ್ ಮುಚ್ಚಿಟ್ಟ ವನೇ, ಅದನ್ನು ಮೇಲಕ್ಕೆ ಹಿಡಿದು ಕೂಗತೊಡಗಿದ- 'ಈ ಸೆಲ್ ಫೋನ್ ಯಾರದ್ದು?!"












Click it and Unblock the Notifications