ಮಮ್ಮಿ ಹಾಕಿಕೊಟ್ಟ ಹಾದಿಯಲ್ಲೇ ಸಾಗುತ್ತೇನೆ!

ವೈಯಾರದಿಂದ ರಮಣಿ, "ನೋ, ನೆವರ್. ನನ್ನ ಮಮ್ಮಿ ಹಾಕಿಕೊಟ್ಟ ಹಾದಿಯಲ್ಲೇ ಸಾಗಬೇಕೆಂದು ನಿರ್ಧರಿಸಿದ್ದೇನೆ. ಸಿಂಗಲ್ ಆಗಿಯೇ ಇರಲು ನಿರ್ಧರಿಸಿದ್ದೇನೆ" ಅಂದಾಗ, ಸಂದರ್ಶಕಾರ್ತಿ ತಲೆತಿರುಗಿ ಬೀಳುವುದೊಂದೇ ಬಾಕಿ.
***
ಸುಷ್ಮಿತಾ ಸೇನ್ - 1.2 ಅಡಿ = ಸಲ್ಮಾನ್ ಖಾನ್
ಸ್ವಿಟ್ಜರ್ ಲಂಡ್ + ಲಂಡನ್ + ನ್ಯೂಜಿಲಂಡ್ + ಕೆನಡಾದಲ್ಲಿ ನಾಲ್ಕು ವಾರಗಳ ವಾಸ್ತವ್ಯ = ಹಿಂದಿ ಚಿತ್ರದ ನಾಲ್ಕು ನಿಮಿಷಗಳ ಒಂದು ಹಾಡು
ಅಮಿತಾಭ್ ಬಚ್ಚನ್ - ಮೃತ್ಯುದಾತಾ + ಕೌನ್ ಬನೇಗಾ ಕರೋಡ್ ಪತಿ = ಸೂಪರ್ ಸ್ಟಾರ್
ಅಮಿತಾಭ್ ಬಚ್ಚನ್ + ಜಯಾ ಬಚ್ಚನ್ - ಪ್ರತಿಭೆ = ಅಭಿಷೇಕ್ ಬಚ್ಚನ್
***
ಹಿಂದಿ ಸಿನೆಮಾ ಶೂಟಿಂಗ್ ನಡೆಯುತ್ತಿರುತ್ತೆ. ಕಾರು ಅಪಘಾತ ನಡೆಯಬೇಕಿರುವ ದೃಶ್ಯ. ಮೊದಲ ಬಾರಿ ನಟಿಸುತ್ತಿರುವ ನಟ ಆತಂಕದಿಂದಲೇ ನಿರ್ದೇಶಕನನ್ನು ಕೇಳುತ್ತಾನೆ, "ಸಾರ್, ಅಪಘಾತದಲ್ಲಿ ಗಾಯಗೊಳ್ತೀನಾ? ಸತ್ತೇಹೋಗ್ತೀನಾ?"
ನಿರಾತಂಕವಾಗಿ ನಿರ್ದೇಶಕ ಹೇಳುತ್ತಾನೆ, "ನಾನೂ ಅದನ್ನೇ ವಿಚಾರ ಮಾಡುತ್ತಿದ್ದೆ. ಹೇಗಿದ್ದರೂ ಇದು ಚಿತ್ರದ ಕಟ್ಟಕಡೆಯ ದೃಶ್ಯ!"
(ಜೋಕ್ಸ್ ಕಳಿಸಿದವರು : ವಿನಾಯಕ ಪಟ್ಟಣಶೆಟ್ಟಿ)












Click it and Unblock the Notifications