ಗುಂಡ ಶಾಲೆಗೆ ಯಾಕೆ ಲೇಟಾಗಿ ಬಂದ?

Laughter is the best medicine, Good Morning
ಗುಂಡ ಒಂದು ದಿನ ಶಾಲೆಗೆ ಲೇಟಾಗಿ ಬಂದ. ಆಗ ಶಾಲಾ ಮಾಸ್ತರರು ಸಿಟ್ಟಾಗಿ,

“ಏಕೋ ಗಂಡ ಲೇಟಾಗಿ ಬಂದೆ?"

“ನಾನು ಬಾವಿಗೆ ನೀರು ತರಲು ಹೋಗಿದ್ದೆ ಸಾರ್, ಅಲ್ಲಿ ಕಾಲು ಜಾರಿ ನದಿಯಲ್ಲಿ ಬಿದ್ದು ಬಿಟ್ಟೆ.."

ಆಗ ಮಾಸ್ತರರು ಹೆದರುತ್ತ “ಮುಂದೆ ಏನಾಯಿತೋ?"

“ನಾನು ಬಹಳ ಕೂಗಿಕೊಂಡೆ ಸಾರ್, ಆದರೆ ಯಾರೂ ಬರಲಿಲ್ಲ"

“ಮುಂದೆ?"

“ನಾನೇ ಎದ್ದು ಬಂದು ಬಿಟ್ಟೆ…"

***

ಜೋತಿಷ್ಯ ಶಾಸ್ತ್ರದಲ್ಲಿ ಬಹಳ ನಂಬಿಕೆ ಇಟ್ಟಿದ್ದ ಗುಂಡ ಒಂದು ಸಲ ಹೊರಗೆ ಹೊರಟಿದ್ದ, ಅಷ್ಟರಲ್ಲಿ ಅವನ ಹೆಂಡತಿ,

“ಏಲ್ಲೀ ಹೋರಟೀರಿ?"

ಆಗ ಸಿಟ್ಟಿಗೆದ್ದ ಗಂಡ “ಸಾಯೋಕೆ!" ಎಂದ.

ಆಗ ಅವನ ಹೆಂಡತಿ “ಹೌದಾ, ಹೋಗಿ ಬನ್ನಿ ನಿಮಗೆ ಒಳ್ಳೆಯದಾಗಲಿ" ಎನ್ನಬೇಕೆ!

***

ಒಂದು ದಿನ ಮಾಸ್ತರ ಶಾಲೆಯಲ್ಲಿ ಗಣಿತ ಕಲಿಸುತಿದ್ದರು. ಆಗ ಗುಂಡನಿಗೆ,

“ಗುಂಡ 1+1 ಕೂಡಿಸಿದರೆ ಬರುವ ಉತ್ತರವೇನು?" ಗುಂಡನಿಗೆ ಏನೂ ಅರ್ಥವಾಗಲಿಲ್ಲ.

ಆಗ ಮಾಸ್ತರರು ಏರಡೂ ಕೈಯ ಒಂದೊಂದು ಬೆರಳುಗಳನ್ನು ಜೋಡಿಸಿ, “ಈಗ ಹೇಳೋ ಬೇಕೂಫ" ಅಂತ ಬೈದರು. ಆಗಲೂ ಏನೂ ಹೇಳದೆ ವಿಚಾರ ಮಾಡಹತ್ತಿದ.

“ಏನು ವಿಚಾರ ಮಾಡುತ್ತಿದ್ದೀಯೋ?"

“ಸಾರ್, ಆ ಎರಡೂ ಕೈ ಬೆರಳು ಕೂಡಿದರೆ ನೀವು ಊಟ ಹೇಗೆ ಮಾಡುವಿರಿ ಸಾರ್…!"

***

ಗುಂಡನಿಗೆ ಜಾತಿ-ಧರ್ಮದಲ್ಲಿ ಎಳ್ಳಷ್ಟೂ ನಂಬಿಕೆಯಿರಲಿಲ್ಲ. ಯಾರಾದರೂ ಅದರ ಬಗ್ಗೆ ಪ್ರಸ್ತಾಪ ಮಾಡಿದರೆ ಕಿಡಿ ಕಾರುತ್ತಿದ್ದ. ಒಂದು ಸಲ ಅವನು ಬೇರೆ ಜಾತಿಯವನನ್ನು ಮುಟ್ಟುವ ಪ್ರಸಂಗ ಬಂದಿತು. ಆಗ,

ಬೇರೆ ಜಾತಿಯವ: ಸಾರ್ ನನ್ನನ್ನು ಮುಟ್ಟಬೇಡಿ.

ಗುಂಡ : ಹೇದರಬೇಡಪ್ಪ, ನನಗೆ ಜಾತಿ-ಧರ್ಮದಲ್ಲಿ ನಂಬಿಕೆ ಇಲ್ಲ.

ಬೇರೆ ಜಾತಿಯವ: ಹಾಗಲ್ಲ ಸಾರ್ , ನಾನು ನಿನ್ನೆ ರಾತ್ರಿ ಕುಡಿದು ಗಟಾರಿನಲ್ಲಿ ಬಿದ್ದಿದ್ದೆ. ಈಗ ಎದ್ದು ಮನೆಗೆ ಹೋರಟಿದ್ದೇನೆ. ಆದ್ದರಿಂದ ಹೇಳಿದೆ ಅಷ್ಟೇ!

ಜೋಕ್ಸ್ ಕಳಿಸಿದವರು : ರವಿ ಬಗಡೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+