ಹಾಲಪ್ಪನೂ ಒಂದೇ ನಿತ್ಯಾನಂದನೂ ಒಂದೇ!

ತಿಮ್ಮ : ಈಗ ಹೊಸದಾಗಿ H1N1 ಅಂತ ಬಂದಿದೆಯಂತೆ, ಹಂಗಂದ್ರೆ ಏನು ಬೊಮ್ಮಣ್ಣೋರೇ?
ಬೊಮ್ಮಣ್ಣ : H1 = ಹಾಲಪ್ಪನೂ ಒಂದೇ N1 = ನಿತ್ಯಾನಂದನೂ ಒಂದೇ ಅಂತಾ! ಗೊತ್ತಾಯ್ತಾ ತಿಮ್ಮಾ..

***

ಕರೆಂಟು ಹೋಗಿದ್ದು ಅನ್ಯಾಯನಾ?

ವನಜಮ್ಮ : ಏನು ಅನ್ಯಾಯರೀ ಇದೂ ಸರಸ್ವತಮ್ಮನೋರೇ , ಮಲ್ಲೇಶ್ವರಂನಲ್ಲಿ ಇವತ್ತು 17 ಸಲ ಕರೆಂಟು ಹೋಗಿತ್ತುರೀ.
ಸರಸ್ವತಮ್ಮ : ಯಾಕ್ರೀ ಅನ್ಯಾಯ ವನಜಮ್ಮಾ, 16 ಸಲ ಕರೆಂಟು ವಾಪಸ್ಸು ಬಂತಲ್ಲ. ಅದು ನ್ಯಾಯ ಅಲ್ವರಾ?

***

ನೋಡಿರದ ಸ್ಥಳ

ಬಡಪಾಯಿ ಗಂಡನ ಬಂಬಾಟ್‌ ಹೆಂಡ್ತಿ ರಾಗವಾಗಿ ಗಂಡನ್ನ ಕೇಳಿದಳು. ರೀ... ಇವತ್ತಿಗೆ ನಮ್ಮ ಮದುವೆ ಆಗಿ 4 ವರ್ಷ ಆಯ್ತು. ಇವತ್ತಾದ್ರೂ ನಾನು ಈವರೆಗೆ ನೋಡ್ದೇ ಇರೋ ಸ್ಥಳಕ್ಕೆ ಕರೆದುಕೊಂಡು ಹೋಗಿ ಊಟ ಹಾಕಿಸ್ತೀರಾ?

ಬಡಪಾಯಿ ಗಂಡ ಕೂಲಾಗಿ ಹೇಳ್ದ, ಸರಿ ನಡಿ ಹಾಗಾರೇ ಅಡಿಗೇಮನೆಗೆ. ನಾಲ್ಕು ವರ್ಷದಿಂದ ನೀನದನ್ನ ನೋಡೇ ಇಲ್ಲ.

***

ನಾನು ವಿವಸ್ತ್ರಳಾಗಿರಲಿಲ್ಲ...

ತಾನು ಒಂದು ತುಂಡು ಬಟ್ಟೆಯನ್ನೂ ಧರಿಸದೇ - ವಿವಸ್ತ್ರಳಾಗಿ ಛಾಯಾಚಿತ್ರಗ್ರಾಹಕನಿಗೆ ಫೋಸ್‌ ಕೊಟ್ಟಿರುವುದಾಗಿ ಪತ್ರಿಕೆಯಲ್ಲಿ ಬಂದ ಸುದ್ದಿಯನ್ನು ನಿರಾಕರಿಸಿದ 'ಬಿಚ್ಚಮ್ಮ" ಎಂದೇ ಖ್ಯಾತಳಾದ ಚಿತ್ರ ನಟಿ ಕೊಟ್ಟ ಕ್ಲಾರಿಫಿಕೇಷನ್‌ ಏನು ಗೊತ್ತೆ?

'ನಾನು ಖಂಡಿತಾ ವಿವಸ್ತ್ರಳಾಗಿರಲಿಲ್ಲ. ಆಗ ನನ್ನ ತಲೆಗೆ ಒಂದು ಸ್ಕಾರ್ಫ್‌ ಕಟ್ಟಿದ್ದೆ. ಸ್ಕಾರ್ಫ್‌ ಕೂಡ ವಸ್ತ್ರವೇ ಆದ್ದರಿಂದ ನಾನು ವಿವಸ್ತ್ರಳಾಗಿರಲು ಹೇಗೆ ಸಾಧ್ಯ?"

***

ಗಣಿತದ ಮಿಸ್‌ ಏನಂತಾರೆ?

ಕನ್ನಡ, ಇಂಗ್ಲಿಷ್‌, ಗಣಿತ ಈ ಮೂರು ಸಬ್ಜೆಕ್ಟ್‌ ಗಳ ಟೀಚರ್ಸ್‌ ಒಂದೇ ರೂಂನಲ್ಲಿದ್ದರು. ಒಮ್ಮೆ ಅವರ ರೂಮಿಗೆ ಕಳ್ಳ ಬಂದ. ಇಂಗ್ಲಿಷ್‌ ಮಿಸ್‌ ಥೀಫ್‌ ಥೀಫ್‌... ಕ್ಯಾಚ್‌ ಹಿಮ್‌ ಎಂದು ಕಿರುಚಿದರು.

ಕನ್ನಡ ಮೇಡಂ.. ಕಳ್ಳ.. ಕಳ್ಳ.. ಹಿಡೀರಿ ಹಿಡಿರೀ ಎಂದ್ರು...

ಈ ಸಂದರ್ಭದಲ್ಲಿ ಗಣಿತದ ಮಿಸ್‌ ಏನಂತಾರೆ?

ಉತ್ತರ : 420... 420.... 420..

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+