ಪೌಡರ್ ಕೊಟ್ರೆ ಲಿಪ್ಸ್‌ಟಿಕ್ ಕೇಳ್ಬಹುದು!
1. ಇಲಿಗಳಿಗೆ ಪೌಡರ್
ಸೇಲ್ಸ್‍ಮ್ಯಾನ್ : ಸಾ...... ನಿಮ್ಗೆ ಈ ಪೌಡರ್ ಬೇಕಾ....?
ರಾಂಪ : ಇದು ಯಾರಿಗೆ ?
ಸೇಲ್ಸ್‍ಮ್ಯಾನ್ : ಇಲಿಗಳಿಗೆ ಸಾರ್....!
ರಾಂಪ : ಬೇಡ..... ಬೇಡ.... ಇವತ್ತು ಪೌಡರ್ ಕೊಟ್ರೆ ನಾಳೆ ಅವುಗಳು ಲಿಪ್ಸ್‌ಟಿಕ್ ಕೇಳ್ಬಹುದು..!
2. ಸಂಬಳ
ಬಾಸ್ : ನೀನು ನನ್ನ ಕಾರ್‌ಗೆ ಡ್ರೈವರ್ ಆದ್ರೆ ಸ್ಟಾರ್ಟಿಂಗ್‍ಗೆ 2000 ರೂ. ಸಂಬಳ ಕೊಡ್ತೀನಿ.
ಚಿಕ್ಕ : ಸರ್, ಸ್ಟಾರ್ಟ್ ಮಾಡೋಕೇ 2000 ರೂ! ಹಾಗಾದರೆ, ಡ್ರೈವಿಂಗ್ ಮಾಡೋಕೆ ಎಷ್ಟು ಕೊಡ್ತೀರಾ?
3. ಈಜುಕೊಳಕ್ಕೆ ಧುಮುಕು
ನಿರ್ದೇಶಕ : ನೀವು ೧೦ನೇ ಮಹಡಿಯಿಂದ ಈಜುಕೊಳಕ್ಕೆ ಧುಮುಕಬೇಕು.
ನಟ : ಆದರೆ ನನಗೆ ಈಜು ಬರುವುದಿಲ್ಲ ?
ನಿರ್ದೇಶಕ : ಯೋಚಿಸಬೇಡಿ, ಅದರಲ್ಲಿ ನೀರು ಇರುವುದಿಲ್ಲ!
4. ಶರಾಬು
ಶರಾಬು ದೇಶದ ಜನರನ್ನು ನಿರ್ಗತಿಕರನ್ನಾಗಿ ಮಾಡುತ್ತಿರುವ ರಾಕ್ಷಸ.
ಬನ್ನಿ, ಎಲ್ಲರೂ ಸೇರಿ ಒಂದೊಂದು ಬಾಟಲಿ ಕುಡಿದು ಎಲ್ಲವನ್ನು ಖಾಲಿ ಮಾಡೋಣ!
5. ವಿಚಿತ್ರ
ಗಂಡ ಕುಡಿದ ಅಮಲಿನಲ್ಲಿ ಹೆಂಡತಿಯ ಹತ್ತಿರ ಬಂದು ಹೇಳಿದ:
'ಲೇ, ಇವತ್ತು ಒಂದು ಭಾರಿ ವಾಹನ ನನ್ನ ಮೇಲೆ ಹರಿದ್ರು ನಾನು ಸಾಯಲಿಲ್ಲ ಕಣೇ'
'ಇದು ವಿಚಿತ್ರಾನೇ. ಅದಿರಲಿ ನಿಮ್ಮ ಮೇಲೆ ಹರಿದ ವಾಹನ ವಾದರೂ ಯಾವುದು?' ಹೆಂಡತಿ ಕೇಳಿದಳು.
'ಏರೋಪ್ಲೇನ್ ಕಣೇ'!
6. ಬ್ರ್ಯಾಂಡಿ
ಸ್ನೇಹಿತ : ಬ್ರ್ಯಾಂಡಿ ಕುಡಿದ್ರೆ ಕೆಮ್ಮು ಹೋಗುತ್ತಾ ?
ಗುಂಡ : ನನ್ನ ಹೊಲ, ಮನೆನೇ ಹೋಗಿರುವಾಗ ನಿನ್ನ ಕೆಮ್ಮು ಯಾಕೆ ಹೋಗಲ್ಲಾ !!!
* ಲೋಕೇಶ್ ಸ್ವಾಮಿ, ಬೆಂಗಳೂರು
ಇನ್ನಷ್ಟು ನಗಲು...











Click it and Unblock the Notifications