ಕಾಂಡೋಮ್ ಗೆ ಆಯುರ್ವೇದದಲ್ಲಿ ಏನಂತಾರೆ?

ಶುದ್ಧವಾದ ಆಯುರ್ವೇದದಲ್ಲಿ ಕಾಂಡೋಮ್ ಗೆ ಏನೆಂದು ಕರೆಯುತ್ತಾರೆ?
''ವೀರ್ಯ ಯೋಧಕ್ ತೈಲಯುಕ್ತ್ ಜನನ ವಿರೋಧಿ ಲಿಂಗ ಕವಚಂ''

****

ಭರವಸೆಯ ಎತ್ತರ ಎಷ್ಟು ಅಂಥ ಗೊತ್ತಾ???
99 ವರ್ಷಗಳ ವಯೋವೃದ್ಧೆಯೊಬ್ಬರು ಏರ್ ಟೆಲ್ ನ ಹೊಸ ಲೈಫ್ ಟೈಂ ಯೋಜನೆಯ ಸಂಪರ್ಕ ಪಡೆಯುವುದು!

****

ಪ್ರಶ್ನೆ: ಹುಟ್ಟಾ ದರೋಡೆಕೋರನ ಮಗನೊಬ್ಬ ಪರೀಕ್ಷೆಯಲ್ಲಿ ಫೇಲಾದಾಗ ಕೊಟ್ಟ ಉತ್ತರ ಏನೂಂತ ಗೊತ್ತಾ?
ಉತ್ತರ: ಯಪೋವ್ ಅವರು ನನ್ನನ್ನು 3 ಗಂಟೆಗಳ ಕಾಲ ನಾನಾ ವಿಧವಾಗಿ ಪ್ರಶ್ನಿಸಿದರು, ಆದರೆ ನಾನು ಒಂಚೂರು ಬಾಯ್ಬಿಟ್ಟಿಲ್ಲ.

****

''ಸೋಮಾರಿತನ ಎನ್ನುವುದು ನಮ್ಮ ಅತಿದೊಡ್ಡ ಶತ್ರು''ಜವಾಹರಲಾಲ್ ನೆಹರು.
''ಪ್ರೀತಿಸುವುದನ್ನು ಶತ್ರುಗಳಿಗೂ ಕಲಿಸಿಕೊಡಬೇಕು '' ಮಹಾತ್ಮಾಗಾಂಧಿ.
ಈಗ ಹೇಳಿ ಯಾರನ್ನು ಅನುಸರಿಸಬೇಕೆಂದು!

****

ಮಿಶ್ರ ಪ್ರತಿಕ್ರಿಯೆ ಎಂದರೆ ಹೇಗಿರುತ್ತೆ???
ನಿಮ್ಮ ಅತ್ತೆ ಏಳನೆ ಮಹಡಿಯಿಂದ ನಿಮ್ಮ ಮರ್ಸಿಡೆಸ್ ಬೆಂಜ್ ಕಾರಿನ ಮೇಲೆ ಧೊಪ್ಪನೆ ಬಿಳುವುದು!!!

****
ವೈಯಾರಿ ವನಜ ಸೀದಾ ಪ್ರೊಫೆಸರ್ ಕ್ಯಾಬಿನ್ ಹೋಗಿ ಹೀಗೆಂದಳು: ಪರೀಕ್ಷೆಯಲ್ಲಿ ಪಾಸು ಮಾಡಿದರೆ ನಾನು ಏನು ಬೇಕಾದರೂ ಕೊಡ್ತೀನಿ.
ಪ್ರೊಫೆಸರ್: ಏನು ಬೇಕಾದರೂ?
ವನಜ: ಹೌದು
ಪ್ರೊಫೆಸರ್: ??
ವನಜ: ಹೌದು ಸಾರ್!!
ಪ್ರೊಫೆಸರ್: ಮನೆಗೆ ಹೋಗಿ ಚೆನ್ನಾಗಿ ಓದಿಕೊಳ್ಳಿ!!!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+