ಜೋಕ್: ಭೂಮಿಗೂ ಚಂದ್ರನಿಗೂ ಏನು ಸಂಬಂಧ..?!
ಟೀಚರ್ : ಭೂಮಿಗೂ ಚಂದ್ರನಿಗೂ ಏನು ಸಂಬಂಧ..?
ಗುಂಡ : ಅಣ್ಣ ತಂಗಿ ಸಂಬಂಧ ಸಾರ್..
ಟೀಚರ್ : ಅದು ಹೇಗೆ...?
ಗುಂಡ : ಏಕೆಂದರೆ ಭೂಮೀನ ನಾವು ತಾಯಿ ಅಂತ ಕರಿತೀವಿ.. ಚಂದ್ರನನ್ನು ನಾವು ಮಾಮಾ ಅಂತ ಕರಿತೀವಿ.. ಅದಕ್ಕೆ ಸಾರ್..
****
ಒಂದು ದಿನ ನಾರದ ಮಹರ್ಷಿಗಳು ವೇಷಧಾರಿಯಾಗಿ ಭೂಲೋಕಕ್ಕೆ ಬಂದು ಬಾರ್ ನಲ್ಲಿ ಕುಳಿತು 10 ಬಾಟಲ್ ಬೀರು ಕುಡಿಯುತ್ತಿದ್ದರು.
ವ್ಯೈಟರ್ : ಏನ್ ಗುರು..! ಹತ್ತು ಬಾಟಲ್ ಬೀರು ಕುಡಿದರೂ ನಿನಗೆ ಕಿಕ್ ಹೊಡೆಯಲಿಲ್ಲವೆ...?
ನಾರದ ಮಹರ್ಷಿಗಳು : ನಾನು ದೇವರು ಕಣಪ್ಪಾ.. ..
ವ್ಯೈಟರ್ : ಈಗ ಟೈಟ್ ಆದಂಗವನೆ ಎಂದು ಅಲ್ಲಿಂದ ಪೇರಿಕಿತ್ತ.....!!!!
****
ಮಗ : ಅಪ್ಪ, ನಾನು ಗಾಂಧೀಜಿ ತರಹ ಆಗಬೇಕು ಅಂತ ಇದ್ದೀನಿ...
ಅಪ್ಪ : ಆಗಪ್ಪಾ.. ಒಳ್ಳೆಯದು...
ಮಗ : ಹಾಗದರೆ, ಗಾಂಧೀಜಿಯವರು 12 ವರ್ಷಕ್ಕೆ ಮದುವೆ ಮಾಡಿಕೊಂಡರಂತೆ. ನನಗೂ ಮದುವೆ ಮಾಡಿಸಪ್ಪಾ....
ಜೋಕು ಕಳುಹಿಸಿದ್ದು: ಸುನಿಲ್ ಕುಮಾರ್, ಬೆಂಗಳೂರು
ಜೋಕು:ಕನ್ನಡ ಚಿತ್ರರಂಗಕ್ಕೆ ಸಾನಿಯಾ ಮಿರ್ಜಾ !












Click it and Unblock the Notifications