ಕಂಪ್ಯೂಟರ್ ಕೀಬೋರ್ಡ್ ಅಕ್ಷರಗಳೆಲ್ಲಾ ಚೆಲ್ಲಾಪಿಲ್ಲಿ!

Sardarji jokes in Kannadaಆವತ್ತಷ್ಟೆ ಸರ್ದಾರ್ ಕೆಲಸಕ್ಕೆ ಸೇರಿದ್ದ. ಬೆಳಗ್ಗಿನಿಂದ ಸಂಜೆತನಕ ತದೇಕ ಚಿತ್ತದಿಂದ ಕೆಲಸ ಮಾಡಿದ.
ಅದನ್ನು ಗಮನಿಸಿದ ಬಾಸ್ "ಒಳ್ಳೇದು ಕಣ್ರೀ, ತುಂಬಾ ಕೆಲ್ಸ ಮಾಡ್ತೀರಾ. ಬೆಳಗ್ಗಿನಿಂದ ಏನೇನು ಮಾಡಿದಿರಿ?"
ಸರ್ದಾರ್ : "ಸರ್, ಕಂಪ್ಯೂಟರ್ ಕೀ ಬೋರ್ಡ್‌ನಲ್ಲಿ ಅಕ್ಷರಗಳು ಚೆಲ್ಲಾಪಿಲ್ಲಿ ಆಗಿದ್ದವು. ಅವನ್ನೆಲ್ಲ ನೀಟಾಗಿ ಎ ಇಂದ ಜೆಡ್ ತನಕ ಜೋಡಿಸಿಟ್ಟೆ"!
***

ಉಪನ್ಯಾಸಕ : ಗಾಂಧೀ ಜಯಂತಿ ಬಗ್ಗೆ ಪ್ರಬಂಧ ಬರೆಯಿರಿ
ಗಾಂಪ : ಗಾಂಧೀ ಒಬ್ಬ ದೊಡ್ಡ ಮನುಷ್ಯ ಆದರೆ ಜಯಂತಿ ಯಾರು ಅಂತ ನನಗೆ ಗೊತ್ತಿಲ್ಲ.

***

ಸರ್ದಾರ್ : ನೀನು ನನಗೆ ಮೋಸ ಮಾಡಿದಿಯಾ.
ಅಂಗಡಿಯವ : ಹೇಗೆ?
ಸರ್ದಾರ್ : ಇದು ಅಮೆರಿಕಾದ ರೇಡಿಯೋ ಅಂತ ಸುಳ್ಳು ಹೇಳಿದಿಯಾ. ಆನ್ ಮಾಡಿ ನೋಡಿದರೆ ಆಲ್ ಇಂಡಿಯಾ ರೇಡಿಯೋ ಅಂತ ಹೇಳತ್ತೆ.

***

ಸರ್ದಾರ್ನ ಗೆಳತಿ ಕೇಳಿದಳು : ಡಾರ್ಲಿಂಗ್ ಡಾರ್ಲಿಂಗ್ , ನಿಶ್ಚಿತಾರ್ಥದ ದಿವಸ ನನಗೆ ಒಂದು ರಿಂಗ್ ಕೊಡ್ತೀರಾ?
ಸರ್ದಾರ್ : ಆಗಬಹುದು ಡಿಯರ್. ಲ್ಯಾಂಡ್ ಲೈನ್ ನಿಂದ ಕೊಡಲೋ ಅಥವಾ ಸೆಲ್ ಫೋನ್ ನಿಂದ ಕೊಡಲೋ?

***

ಇಬ್ಬರು ಸರ್ದಾರ್ಜಿಗಳು ಸೇರಿಕೊಂಡು ಒಂದು ಕಾರಿನಲ್ಲಿ ಬಾಂಬ್ ಪ್ಲಾಂಟ್ ಮಾಡುತ್ತಿದ್ದರು. ಒಬ್ಬ ಕೇಳಿದ: ಅಲ್ಲ ಕಣಯ್ಯ ಆಕಸ್ಮಾತ್ ಬಾಂಬ್ ಢಂ ಎಂದುಬಿಟ್ಟರೆ ಎನ್ ಗತಿ?
ಇನ್ನೊಬ್ಬ : ಯೋಚನೆ ಮಾಡಬೇಡಾ ಗುರೂ, ನನ್ನ ಹತ್ರ ಇನ್ನೊಂದು ಬಾಂಬ್ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+