ಸುಬ್ಬುವಿನ ಕೊನೆಯ ಆಸೆಯೇನು ಗೊತ್ತಾ?
ಸುಬ್ಬು ಇನ್ನೇನು ಕೊನೆಯುಸಿರೆಳೆಯುವ ಹಂತದಲ್ಲಿದ್ದ. ಜೀವನದಲ್ಲಿ ಮೇಲಿಂದ ಮೇಲೆ ಮೇಲಿಂದ ಮೇಲೆ ಹೊಡೆತಗಳನ್ನು ತಿಂದಿದ್ದ ಸುಬ್ಬು ವಿಪರೀತ ಕೃಶವಾಗಿದ್ದ. ಆಸ್ಪತ್ರೆಯಲ್ಲಿಟ್ಟುಕೊಂಡು ಪ್ರಯೋಜನವಿಲ್ಲವೆಂದು ಆತನನ್ನು ಮನೆಗೆ ಕಳುಹಿಸಿದ್ದರು.
ಕೊನೆಕ್ಷಣದಲ್ಲಿ ಹೆಂಡತಿಯೊಡನೆ ಮಾತಾಡೋಣವೆಂದು ಆಕೆಯನ್ನು ಕರೆದ. ದಢೂತಿ ಸುಬ್ಬಿ ಬಂದು ಸುಬ್ಬುವಿನ ಪಕ್ಕದಲ್ಲಿ ಕುಳಿತಳು. ನನ್ನ ಕೊನೆಯಾಸೆಯೊಂದನ್ನು ನಡೆಸಿ ಕೊಡ್ತಿಯಾ ಅಂತ ಅಲವತ್ತುಕೊಂಡ ಸುಬ್ಬು. ಸರಿ, ಅದೇನು ಹೇಳಿ ಎಂದಳು ಸುಬ್ಬಿ.
ತೇಲುಗಣ್ಣು ಮೇಲುಗಣ್ಣು ಮಾಡಿಕೊಂಡು ಉಗುಳು ನುಂಗುತ್ತ ಸುಬ್ಬು ಹೇಳಿದ, ನಾನು ಸತ್ತ ಮೇಲೆ ನೀನು ಪಕ್ಕದ ಮನೆಯ ಸುಬ್ರಾಯ್ ನನ್ನೇ ಮದುವೆಯಾಗು. ಆಶ್ಚರ್ಯಚಕಿತಳಾದ ಸುಬ್ಬಿ ಏಕೆಂದು ಕೇಳಿದಳು.
ಕೆರಳಿದ ಸರ್ಪದಂತೆ ಮುಖ ಮಾಡಿದ ಸುಬ್ಬು, ಆತನ ಮೇಲೆ ನಾನು ಸೇಡು ತೀರಿಸಿಕೊಳ್ಳಬೇಕು ಎಂದ ಸುಬ್ಬು!
***
ಅರಮನೆ ಎಲ್ಲಂತ ಪುಟ್ಟು ತೋರಿಸ್ತಾನೆ!
ಒಂದು ಬಾರಿ ಸುಬ್ಬು, ಸುಬ್ಬಿ ಮತ್ತು ಅವರ ಮಗಳು ಮೈಸೂರಿಗೆ ಯಾರದೋ ಮದುವೆಗಂತ ಕಾರಿನಲ್ಲಿ ಹೋಗಿದ್ರು. ಸುಬ್ಬಿಯ ನಾಲ್ಕು ವರ್ಷದ ಮಗಳು ಮಿಟಕಲಾಡಿ ಮೀನಾಕ್ಷಿಗೆ ಅರಮನೆ ನೋಡಬೇಕಂತ ಆಸೆ. ಮೈಸೂರಿನ ಯಾವುದೋ ಮೂಲೆಯಲ್ಲಿದ್ದ ಮದುವೆ ಮುಗಿಸಿಕೊಂಡು ಕಾರಿನಲ್ಲಿ ಅರಮನೆ ನೋಡೋಣ ಅಂತ ಹೊರಟ್ರು. ಸುಬ್ಬನಿಗೆ ಬಂದ ದಾರಿ ತಪ್ಪೇ ಹೋಗಿತ್ತು. ಎಷ್ಟೇ ಹುಡುಕಾಡಿದ್ರೂ ಅರಮನೆ ದಾರಿ ಸಿಗಲೇ ಇಲ್ಲ. ನಂತರ ಬೇರೆ ದಾರಿ ಕಾಣದೇ ಸುಬ್ಬ ಸುಬ್ಬಿಗೆ ಅರಮನೆ ಎಲ್ಲಿದೆ ಅಂತ ಯಾರನ್ನಾದ್ರೂ ಕೇಳು ಅಂತ ಹೇಳ್ದ.
ಮೀನಾಕ್ಷಿ ಸುಮ್ಮನಿರಲಾರದೇ, "ಅಪ್ಪಾ ಚಿಕ್ಕಪ್ಪನ ಮಗ ಪುಟ್ಟೂನ ಕಾರಲ್ಲಿ ಕರಕೊಂಡು ಬಂದಿದ್ರೆ ಅರಮನೆ ಎಲ್ಲಂತ ತೋರಿಸ್ತಿದ್ದ" ಅಂದ್ಳು.
"ಅವನಿಗೇನೇ ಗೊತ್ತಾಗತ್ತೆ? ನಮಗೇ ದಾರಿ ಗೊತ್ತಾಗ್ತಾ ಇಲ್ಲ. ನಿನ್ನಷ್ಟೇ ವಯಸ್ಸಿನ ಅವನೇನು ತೋರಿಸ್ತಾನೆ" ಅಂತ ಸುಬ್ಬಿ ಮೀನಾಕ್ಷಿಗೆ ಗದರಿದಳು.
"ಅಲ್ಲಮ್ಮ... ಪುಟ್ಟು ಮೊನ್ನೆ 'ಅರಮನೆ' ಪಿಚ್ಚರು ನೋಡ್ಕೊಂಡು ಬಂದಿದ್ದಾನೆ. ಅವನಿಗೆ ಗೊತ್ತಿರತ್ತೆ!" ಅಂದಾಗ ಸುಬ್ಬ, ಸುಬ್ಬಿ ಇಬ್ಬರೂ ತಬ್ಬಿಬ್ಬು.
ಮತ್ತಷ್ಟು ಜೋಕ್ಸ್
ಐಶ್ವರ್ಯ ನೋಡಿ ಮೂರ್ಛೆ ಹೋದ ಪೂಜಾರಿ











Click it and Unblock the Notifications